×
Ad

ಮಂಗಳೂರು : ವಿಕಾಸ ಪದವಿ ಪೂರ್ವ ಕಾಲೇಜಿಗೆ ಕೇಂದ್ರ ಸಚಿವ ಪ್ರತಾಪ್ ರೂಡಿ ಭೇಟಿ

Update: 2016-04-09 18:58 IST

ಮಂಗಳೂರು, ಎ.9: ನಗರದ ಮೇರಿಹಿಲ್‌ನಲ್ಲಿರುವ ವಿಕಾಸ ಪದವಿ ಪೂರ್ವ ಕಾಲೇಜಿಗೆ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ರಾಜೀವ್ ಪ್ರತಾಪ್ ರೂಡಿ ಶನಿವಾರ ಭೇಟಿ ನೀಡಿದರು.
ಈ ಸಂದರ್ಭ ಅವರು ಸ್ಮರ್ಧಾತ್ಮಕ ಪರೀಕ್ಷೆಯ ‘60/60 ಸೂತ್ರ’ ಪುಸ್ತಕವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳನ್ನು ಒಳಗೊಂಡಿರುವ ಈ ‘60/60 ಸೂತ್ರ’ ಪುಸ್ತಕವನ್ನು ಗ್ರಾಮೀಣ ಪ್ರದೇಶದ 100 ಬಡ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಸಂಸ್ಥೆಯ ಟ್ರಸ್ಟಿಗಳಾದ ಜೆ.ಕೊರಗಪ್ಪ, ಸೂರಜ್ ಕಲ್ಯ, ಸಲಹೆಗಾರ ಡಾ.ಅನಂತಪ್ರಭು ಜಿ., ಉಪಪ್ರಾಂಶುಪಾಲೆ ಮೋಹನಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News