×
Ad

ಕಡಬ : SKSSF ಮರ್ಧಾಳ ಕ್ಲಸ್ಟರ್ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಸೌಹಾರ್ದ ಸಂಗಮ

Update: 2016-04-09 20:12 IST

ಕಡಬ, ಎ.9. SKSSF ಮರ್ಧಾಳ ಕ್ಲಸ್ಟರ್ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಸೌಹಾರ್ದ ಸಂಗಮವು ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ವಠಾರದಲ್ಲಿ ಶನಿವಾರ ರಾತ್ರಿ ನಡೆಯಿತು.

ಈ ಸಂದರ್ಭದಲ್ಲಿ SKSSF ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿಯವರು ದಿಕ್ಸೂಚಿ ಭಾಷಣವನ್ನು ನೆರವೇರಿಸಿದರು. ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿಯವರು ಮುಖ್ಯ ಪ್ರಭಾಷಣಗೈದರು. ಜಿ.ಪಂ. ಸದಸ್ಯರಾದ ಪಿ.ಪಿ.ವರ್ಗೀಸ್ ಧ್ವಜಾರೋಹಣಗೈದರು. ಪಿ.ಎಂ.ಇಬ್ರಾಹಿಂ ದಾರಿಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟಿ.ಎಚ್.ಶರೀಫ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ಸಂಚಾಲಕರಾದ ರೆ! ಫಾ! ಆ್ಯಂಟನಿ ಒ.ಐ.ಸಿ., ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಕೈಕುರೆ, ಐತ್ತೂರು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ಕೆ., ಮರ್ಧಾಳ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್, ಮರ್ಧಾಳ ಗ್ರಾ.ಪಂ. ಸದಸ್ಯ ಹರೀಶ್ ಕೋಡಂದೂರು, ಕುಟ್ರುಪ್ಪಾಡು ಗ್ರಾ.ಪಂ.ಸದಸ್ಯರಾದ ಮಹಮ್ಮದ್ ಆಲಿ, ಅಶ್ರಫ್ ಕೊಳ್ಳೆಜಾಲ್, ಶರೀಫ್ ಫೈಝಿ ಪನ್ಯ, ಪುತ್ತುಮೋನು ಅನ್ನಡ್ಕ ಮೊದಲಾದವರು ಉಪಸ್ಥಿತರಿದ್ದರು. ಜಾಬಿರ್ ಫೈಝಿ ಬನಾರಿ ದುವಾ ನೆರವೇರಿಸಿದರು.
ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ಪಿ.ಎಂ.ಯಹ್ಯಾ ಮುಸ್ಲಿಯಾರ್ ವಂದಿಸಿದರು. ಪಿ.ಎ.ಮರ್ಧಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News