×
Ad

ಚುಟುಕು ಸುದ್ದಿಗಳು

Update: 2016-04-09 23:24 IST

ಇಂದು ಯಕ್ಷಮಂಗಳ ತಂಡದಿಂದ ಯಕ್ಷಗಾನ ಪ್ರದರ್ಶನ
ಕೊಣಾಜೆ, ಎ.9: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಎ.10ರಂದು ರವಿವಾರ ಅಪರಾಹ್ನ 2:30ರಿಂದ ಮಡಂತ್ಯಾರು ಸಮೀಪದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ನಿರ್ದೇಶನದಲಿ ‘ಸಾಯುಜ್ಯ ಸಂಗ್ರಾಮ’ ಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

ಬಾಲವಿಕಾಸ ಅಕಾಡಮಿಗೆ ಆಯ್ಕೆ
ಮಂಗಳೂರು, ಎ.9: ಕರ್ನಾಟಕ ಬಾಲವಿಕಾಸ ಅಕಾಡಮಿಯ ದ.ಕ. ಜಿಲ್ಲಾ ಮಂಗಳೂರು ತಾಲೂಕು ಸದಸ್ಯರನ್ನಾಗಿ ಹೇಮಾ ಯು. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.

ಕಾರಾಜೆ: ಇಂದು ಸ್ವಲಾತ್ ವಾರ್ಷಿಕ
ವಿಟ್ಲ, ಎ.9: ನೂರುಲ್ ಹುದಾ ಜುಮಾ ಮಸೀದಿ ಕಾರಾಜೆ ಇದರ ಆಶ್ರಯದಲ್ಲಿ 13ನೆ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಎ.10ರಂದು ಇಲ್ಲಿನ ಮಸೀದಿ ವಠಾರದಲ್ಲಿರುವ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಸೈಯದ್ ಫಝಲ್ ಜಮಲುಲ್ಲೈಲಿ ತಂಙಳ್ ಸಬರಬೈಲು ನೇತೃತ್ವದಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವನ್ನು ಎನ್.ಎ. ಅಬ್ದುಲ್ ರಹಿಮಾನ್ ಮದನಿ ಉದ್ಘಾಟಿಸುವರು. ಸ್ಥಳೀಯ ಖತೀಬ್ ಯೂಸುಫ್ ಮದನಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

ವಳಚ್ಚಿಲ್‌ನಲ್ಲಿ ಸಲಫಿ ಸಮಾವೇಶ
ಮಂಗಳೂರು, ಎ.9: ಕುರ್‌ಆನ್ ಮತ್ತು ಸುನ್ನತ್‌ನ ಆಧಾರದಲ್ಲಿ ಅಂಧಕಾರದಿಂದ ಪ್ರಕಾಶದೆಡೆಗೆ ಬರಲು ‘ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್’ ಫರಂಗಿಪೇಟೆ ಘಟಕದ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ವಳಚ್ಚಿಲ್ ಜಂಕ್ಷನ್‌ನಲ್ಲಿ ನಡೆಯಿತು.
 ಮೌಲವಿ ಬಾದುಷಾ ಬಾಖವಿ ಹಾಗೂ ಮೌಲವಿ ಮುಸ್ತಫಾ ದಾರಿಮಿ ಪ್ರವಚನ ನೀಡಿದರು.ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಕೇಂದ್ರ ಸಮಿತಿಯ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್, ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ, ಜಬ್ಬಾರ್ ಉಪಸ್ಥಿತರಿದ್ದರು.

ತನಿಖೆಗೆ ಕಾಂಗ್ರೆಸ್ ಒತ್ತಾಯ
 ಹೊಸದಿಲ್ಲಿ, ಎ.9: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹತ್ಯೆಯ ಬಗ್ಗೆ ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ, ಬಾಹ್ಯ ಶಕ್ತಿಗಳ ಒತ್ತಡಕ್ಕೆ ಬಲಿಯಾಗದೆ ನಿಷ್ಪಕ್ಷವಾದ ಸಮಗ್ರವಾದ ತನಿಖೆ ನಡೆಸಿ ಪಾತ್ರಧಾರಿಗಳ ಜತೆ ಸೂತ್ರಧಾರಿಗಳನ್ನೂ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಒತ್ತಾಯಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಹತ್ಯೆಯಾದಾಗ ದೊಂಬಿ, ಗಲಾಟೆ ಎಬ್ಬಿಸಿ ಬೊಬ್ಬಿಡುವ ರಾಷ್ಟ್ರವಾದಿ ಪಕ್ಷದ ಮುಖಂಡರು ಈ ಘಟನೆ ಬಗ್ಗೆ ಸುಮ್ಮನಿದ್ದಾರೆ. ಹತ್ಯೆಯನ್ನು ಖಂಡಿಸಲಿಲ್ಲ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಮನವಿ
 ಮಂಗಳೂರು, ಎ.9: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಕನಿಷ್ಠ 25 ಲಕ್ಷ ರೂ. ಪರಿಹಾರ ಧನವನ್ನು ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರರಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ಅಡ್ಕರೆಪಡ್ಪು: ಅನುಸ್ಮರಣೆ ಕಾರ್ಯಕ್ರಮ
ಉಳ್ಳಾಲ. ಎ, 9: ಯುವ ಜನಾಂಗ ಇಸ್ಲಾಮ್ ಧರ್ಮದ ಚೌಕಟ್ಟಿನಲ್ಲಿ ಬಾಳಿ ಬದುಕಿದರೆ ಇಸ್ಲಾಮ್ ಧರ್ಮ ನೆಲೆ ನಿಲ್ಲಲು ಸಾಧ್ಯ ಎಂದು ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯರ್ ಅಭಿಪ್ರಾಯಪಟ್ಟರು.
ತಾಜುಲ್ ಇಸ್ಲಾಮ್ ಆಶ್ರಯದಲ್ಲಿ ಕೊಣಾಜೆ ಅಡ್ಕರೆಪಡ್ಪುವಿನಲ್ಲಿ ನಡೆದ ತಾಜುಲ್ ಉಲಮಾ, ನೂರುಲ್ ಉಲಮಾ, ಪೊಸೋಟ್ ತಂಙಳ್ ಅನುಸ್ಮರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
 ಅಡ್ಕರೆಪಡ್ಪು ಮಸೀದಿಯ ಖತೀಬ್ ಹಂಝ ಸಖಾಫಿ ಅಲ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು. ಉಮರ್ ಸಖಾಫಿ ಆನೇಕಲ್ ಮುಖ್ಯ ಪ್ರಭಾಷಣಗೈದರು. ಮುಖ್ಯ ಅತಿಥಿಗಳಾಗಿ ಅಬೂಸ್ವಾಲಿಹ್ ಸಖಾಫಿ ಅಲ್ ಕಾಮಿಲ್, ಸುಲೈಮಾನ್ ಸಖಾಫಿ, ಅಬ್ದುಲ್ ಬಾರಿ ಸಅದಿ, ಅಬ್ದುಲ್ ಹಮೀದ್ ಮದನಿ, ಅಬ್ಬಾಸ್ ಝಹರಿ, ಶರೀಫ್ ಮುಸ್ಲಿಯಾರ್, ಅಬ್ದುರ್ರಹ್ಮಾನ್ ಸಖಾಫಿ, ಇಸ್ಮಾಯೀಲ್ ಸಅದಿ ಅಲ್ ಅಫ್ಲಲಿ ಉರುಮಣೆ, ಅಬ್ದುಲ್ ಅಝೀಝ್ ಸಅದಿ ಅಲ್ ಅಫ್‌ಳಲಿ, ಅಬ್ದುಲ್ ಹಮೀದ್ ಮದನಿ, ಮುಹಮ್ಮದ್ ಮುಸ್ತಫಾ, ಮುಹಮ್ಮದ್ ನಿಯಾಝ್ ಸೈಟ್, ಉಸ್ಮಾನ್ ಸೈಟ್, ತಾಜುಲ್ ಇಸಾಕ್, ಕೆ.ಯು. ಮುಹಮ್ಮದ್, ಹಾಜಿ ಅಹ್ಮದ್ ಬಾವ, ಹಾಜಿ ಶೌಕತ್ ದೇರಳಕಟ್ಟೆ, ಮುಹಮ್ಮದ್ ಮದನಿ, ಮುಹಮ್ಮದ್ ಮಹ್‌ಫೂಝ್ ಉಪಸ್ಥಿತರಿದ್ದರು.
ಅಬ್ದುಲ್ ನಝೀರ್ ಸಖಾಫಿ ಸ್ವಾಗತಿಸಿದರು. ರಿಯಾಝ್ ವಂದಿಸಿದರು.

ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ
 ಮಂಗಳೂರು, ಎ.9: ನಗರದ ಸ್ವಾಮಿ ಸದಾನಂದ ಸರಸ್ವತಿ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ಭಾರತಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ರಜಾ ಶಿಬಿರದ ಅಂಗವಾಗಿ ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ವತಿಯಿಂದ ಬೆಂಕಿ ಅಪಘಾತಕ್ಕೀಡಾದ ಸಂದರ್ಭ ಎದುರಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿತೆಯು ಮಂಗಳವಾರ ಕಾಲೇಜಿನಲ್ಲಿ ನಡೆಯಿತು.
ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಶೇಖರ್ ಬಿ. ಮತ್ತು ಅಗ್ನಿಶಾಮಕ ದಳದ ಕಚೇರಿಯ ಅಧಿಕಾರಿ ಗಂಗಾನಾಯ್ಕಿ ಜೆ. ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು, ಉಪ ಕಮಾಂಡೆಂಟ್ ರಮೇಶ್, ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ಕೋಶಾಧಿಕಾರಿ ಕೃಷ್ಣ ನೀರಮೂಲೆ, ಮಂಗಳೂರು ಹವ್ಯಕ ಮಂಡಲದ ಅಧ್ಯಕ್ಷ ಕೆ.ಪಿ.ಭಟ್ ಉಪಸ್ಥಿತರಿದ್ದರು.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ
ಕ್ರಿಮಿನಲ್ ಕೇಸು ದಾಖಲಿಸಲು ಒತ್ತಾಯ
ಮೂಡುಬಿದಿರೆ, ಎ.9: ಪಿಯುಸಿ ಪ್ರಶ್ನೆ ಪತ್ರಿಕೆಯ ಸೋರಿಕೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿರುವ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು. ಅವರನ್ನು ಹುದ್ದೆಯಿಂದ ಅಮಾನತುಗೊಳಿಸುವ ಬದಲು ವಜಾ ಮಾಡಬೇಕು ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಆಗ್ರಹಿಸಿದ್ದಾರೆ
 ಪ್ರಕರಣದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಅವರು ನೇರ ಹೊಣೆಯಾಗುವುದಿಲ್ಲ. ಅವರು ಅಂತಹ ಕೆಲಸವನ್ನು ಬೆಂಬಲಿಸುವವರೂ ಅಲ್ಲ. ಅಧಿಕಾರಿಗಳ ಬೇಜವಾಬ್ದಾರಿಗೆ ಸಚಿವರ ರಾಜೀನಾಮೆಗೆ ಒತ್ತಾಯಿಸುವುದರಲ್ಲಿ ಅರ್ಥವಿಲ್ಲ ಎಂದ ಅವರು ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯವಿದೆ ಎಂದರು.

ಇಂದು ಹಿಂದೂ ಮಹಾಸಭಾ ರಾಜ್ಯ ಸಮ್ಮೇಳನ
ಮಂಗಳೂರು, ಎ. 9: ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಮ್ಮೇಳನ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎ.10ರಂದು ನಗರದ ಕದ್ರಿ ಯೋಗೀಶ್ವರ ಮಠದಲ್ಲಿ ನಡೆಯಲಿದೆ ಎಂದು ರಾಜ್ಯಾಧ್ಯಕ್ಷೆ ಅಂಬಿಕಾ ನಾಯಕ್ ಹೇಳಿದರು.ಕದ್ರಿ ಶ್ರೀ ಯೋಗೀಶ್ವರ ಮಠದ ಪೀಠಾಧಿಕಾರಿ ಯೋಗಿರಾಜ ನಿರ್ಮಲನಾಥ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

ಆರೋಪಿಗಳ ಬಂಧನಕ್ಕೆ ಸಿಪಿಐ ಒತ್ತಾಯ
ಮಂಗಳೂರು, ಎ.9: ತುಮಕೂರಿನಲ್ಲಿ ಎಐಎಸ್‌ಎಫ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿ ಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಮೂಲಕ ಮುಖ್ಯ ಮಂತ್ರಿ ಹಾಗೂ ಗೃಹ ಸಚಿವರಿಗೆ ಸಿಪಿಐ ನಿಯೋಗ ಮನವಿ ಸಲ್ಲಿಸಿತು.
ಪ್ರಕರಣಗಳ ಸತ್ಯಾಸತ್ಯತೆಯನ್ನು ಕರಪತ್ರಗಳಲ್ಲಿ ಮುದ್ರಿಸಿ ತುಮ ಕೂರಿನ ಶಾಲಾ ಕಾಲೇಜು ವಿದ್ಯಾ ರ್ಥಿಗಳಿಗೆ, ಸಾರ್ವಜನಿಕರಿಗೆ ಹಂಚುತ್ತಿದ್ದ ಎಐಎಸ್‌ಎಫ್ ಹಾಗೂ ಎಐಟಿಯುಸಿ ಕಾರ್ಯಕರ್ತರ ಮೇಲೆ ಸಂಘಪರಿವಾರದ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ.ರಾವ್, ಸಹ ಕಾರ್ಯದರ್ಶಿಗಳಾದ ಎಸ್. ಬೇರಿಂಜ, ಬಿ.ಶೇಖರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ್ ಕುಮಾರ್ ಬಂಟ್ವಾಳ್, ಎಂ.ಕರುಣಾಕರ್ ಮಾರಿಪಳ್ಳ ಉಪಸ್ಥಿತರಿದ್ದರು.

ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಬ್ಯಾರಿಕೇಡ್ ಹಸ್ತಾಂತರ
ಮುಲ್ಕಿ, ಎ.9: ಕೊಳ್ನಾಡಿನ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೂಲ್ಕಿ ಬಸ್ ನಿಲ್ದಾಣದ ಬಳಿ ಸುಮಾರು 80 ಸಾವಿರ ರೂ. ವೆಚ್ಚದ 8 ಬ್ಯಾರಿಕೇಡ್‌ಗಳನ್ನು ಸಂಚಾರಿ ಪೊಲೀಸರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸ್ ವೃತ್ತ ನಿರೀಕ್ಷ ಮಂಜುನಾಥ್, ಬಿಸ್ಲರಿ ಕಂಪೆನಿಯ ಎನ್.ಜೆ. ಶೆಟ್ಟಿ, ಉದ್ಯಮಿ ಸಮದ್, ಕ್ಲಬ್‌ನ ಗೌರವಾಧ್ಯಕ್ಷರಾದ ರವೂಫ್, ಪ್ರಭಾಕರ ಬುನ್ಯಾನ್, ಅಧ್ಯಕ್ಷ ಅಬ್ದುಲ್ ಖಾದರ್ ಎ.ಎಚ್., ಉಪಾಧ್ಯಕ್ಷ ಅಶ್ರಫ್, ಕಾರ್ಯದರ್ಶಿ ನಿಯಾಝ್, ಕ್ರಿಕೆಟ್ ತಂಡದ ನಾಯಕ ರಶೀದ್, ಸಲಹೆಗಾರ ಸಮದ್, ಮೊಯ್ದಿನ್, ಅಬ್ಬಾಸ್, ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

ಮೂಡುಬಿದಿರೆ: ಬಿಜೆಪಿ ಸ್ಥಾಪನಾ ದಿನಾಚರಣೆ
ಮೂಡುಬಿದಿರೆ, ಎ.9: ಪುತ್ತಿಗೆ ಶಕ್ತಿ ಕೇಂದ್ರದ ವತಿಯಿಂದ ಇಲ್ಲಿನ ಸಮಾಜ ಮಂದಿರದಲ್ಲಿ ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆ ನಡೆಯಿತು.
ಬಿಜೆಪಿ ಜಿಲ್ಲಾ ಮುಖಂಡರಾದ ಸುದರ್ಶನ ಎಂ., ಮಂಡಳ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ರಾಜ್ಯ ಪರಿಷತ್ ಸದಸ್ಯ ಕೆ. ಆರ್. ಪಂಡಿತ್, ಮಂಡಲ ಕಾರ್ಯದರ್ಶಿ ನಾಗರಾಜ ಪೂಜಾರಿ, ಶಕ್ತಿ ಕೇಂದ್ರದ ಪ್ರಮುಖ್ ಅಜಯ್ ರೈ ಉಪಸ್ಥಿತರಿದ್ದರು. ಮಾಸ್ತಿಕಟ್ಟೆ ಶಾಲಾ ವಾರ್ಷಿಕೋತ್ಸವ ಮೂಡುಬಿದಿರೆ, ಎ.9: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘ ಮಾಸ್ತಿಕಟ್ಟೆ ಇವುಗಳ ವಾರ್ಷಿಕೋತ್ಸವ ಹಾಗೂ ಶಾಲೆಗೆ ಸಹಕರಿಸುತ್ತಿರುವ ಹಿರಿಯರಾದ ಎಂ.ಬಾವುದ್ದೀನ್, ಬಿ.ಮೋಹನದಾಸ್ ಶೆಟ್ಟಿ, ಎಂ.ಶೀನ ಹಾಗೂ ರವಿಚಂದ್ರ ಕೃಷ್ಣಗೌಡರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಪುರಸಭಾ ಅಧ್ಯಕ್ಷೆ ರೂಪಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಪುರಸಭಾ ಸದಸ್ಯೆ ಪ್ರೇಮಾ ಸಾಲ್ಯಾನ್, ಛಾಯಾಗ್ರಾಹಕ ದಿವ್ಯವರ್ಮ ಬಲ್ಲಾಳ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ನಾಗೇಶ್, ಪೊಣ್ಣೆಚ್ಚಾರಿಗುತ್ತು ಪೃಥ್ವಿರಾಜ್ ಜೈನ್, ತೋಡಾರು ಬಡಕೋಡಿ ಗುತ್ತುವಿನ ಉಮೇಶ್ ಹೆಗ್ಡೆ, ರಾಜೇಶ್ ನಾಯ್ಕೆ ಮುಖ್ಯ ಅತಿಥಿಗಳಾಗಿದ್ದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸೆಲ್ವ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಗೋಪಾಲ್ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸದಸ್ಯೆ ಪ್ರಭಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ನಿರ್ಮಲಾ ವರದಿ ವಾಚಿಸಿದರು. ಮೋಹಿನಿ ಸನ್ಮಾನ ಪತ್ರ ವಾಚಿಸಿದರು. ಸಂಗೀತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನ್ನಪೂರ್ಣೇಶ್ವರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News