ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿ: ಇಂದು ಭಾರತಕ್ಕೆ ಕೆನಡಾ ಎದುರಾಳಿ

Update: 2016-04-09 18:14 GMT

ಇಪೋ(ಮಲೇಷ್ಯಾ), ಎ.9: ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಮರಳಿಕೆಯಿಂದಾಗಿ ಶಕ್ತಿಯುತವಾಗಿರುವ ಭಾರತದ ಪುರುಷರ ಹಾಕಿ ತಂಡ ರವಿವಾರ ಇಲ್ಲಿ ನಡೆಯಲಿರುವ 25ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿಯ ತನ್ನ 3ನೆ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ.

 ತಂದೆಯ ನಿಧನದಿಂದಾಗಿ ಮೊದಲ ಪಂದ್ಯ ಆರಂಭವಾಗುವ ಮೊದಲೇ ಬುಧವಾರ ಸ್ವದೇಶಕ್ಕೆ ವಾಪಸಾಗಿದ್ದ ಮನ್‌ಪ್ರೀತ್ ಶನಿವಾರ ಬೆಳಗ್ಗೆ ತಂಡವನ್ನು ಸೇರಿಸಿಕೊಂಡು ಅಭ್ಯಾಸ ನಡೆಸಿದ್ದಾರೆ. ಭಾರತ 2 ಪಂದ್ಯಗಳಲ್ಲಿ 3 ಅಂಕವನ್ನು ಗಳಿಸಿದೆ. ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು 2-1 ಅಂತರದಿಂದ ಮಣಿಸಿದ್ದ ಭಾರತ ಎರಡನೆ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ವಿರುದ್ಧ 1-5 ಅಂತರದಿಂದ ಸೋತಿತ್ತು.

ಮನ್‌ಪ್ರೀತ್ ಅನುಪಸ್ಥಿತಿಯಲ್ಲಿ ಆಸೀಸ್ ವಿರುದ್ಧ ಪಂದ್ಯದಲ್ಲಿ ಮಿಡ್‌ಫೀಲ್ಡ್ ವಿಭಾಗದಲ್ಲಿ ಪರದಾಟ ನಡೆಸಿದ್ದ ಭಾರತ ತಂಡ ಕೆನಡಾವನ್ನು ಕೆಡಹುವ ಉತ್ಸಾಹದಲ್ಲಿದೆ. 3 ಪಂದ್ಯಗಳಲ್ಲಿ 4 ಅಂಕವನ್ನು ಗಳಿಸಿರುವ ಕೆನಡಾ ತಂಡ ಜಪಾನ್‌ನ್ನು 3-1 ರಿಂದ ಮಣಿಸಿತ್ತು. ಆದರೆ, ಪಾಕಿಸ್ತಾನ ವಿರುದ್ಧ 1-3 ರಿಂದ ಸೋತಿತ್ತು. ಹಾಲಿ ಚಾಂಪಿಯನ್ ನ್ಯೂಝಿಲೆಂಡ್‌ನ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News