ಪುತ್ತೂರು : ಜಾತ್ರೋತ್ಸವ ಆಮಂತ್ರಣ ಪತ್ರಿಕೆ ವಿತರಣೆ
ಪುತ್ತೂರು, ಎ.9: ಪುತ್ತೂರು ಮಹತೋ ಭಾರ ಶ್ರೀಮಹಾಲಿಂಗೇಶ್ವರ ದೇವಳದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮ ಶನಿವಾರ ಪುತ್ತೂರು ನಗರಾದ್ಯಂತ ಶಾಸಕಿ ಶಕುಂತಳಾ ಶೆಟ್ಟ ನೇತೃತ್ವದಲ್ಲಿ ನಡೆಯಿತು.
ದರ್ಬೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಜಾತ್ರೋತ್ಸವ ಸೌಹಾರ್ದಯುತವಾಗಿ ನೆರವೇರಲು ಹಾಗೂ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಎಂಬ ನಿಟ್ಟಿನಲ್ಲಿ ನಗರದ ಎಲ್ಲ ಅಂಗಡಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಮಂತ್ರಣ ಪತ್ರಿಕೆ ಹಂಚಲಾಗುತ್ತಿದೆ ಎಂದರು. ಬಳಿಕ ದರ್ಬೆಯಿಂದ ಬೊಳುವಾರು ತನಕ ಕಾಲ್ನಡಿಗೆ ಮೂಲಕ ಆಮಂತ್ರಣ ಪತ್ರಿಕೆ ವಿತರಣೆ ಮಾಡಲಾಯಿತು. ತಾಪಂ ಇಒ ಹಾಗೂ ದೇವಳದ ಆಡಳಿತಾಧಿಕಾರಿ ಜಗದೀಶ್ ಎಸ್., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಸೇವಾದಳದ ತಾಲೂಕು ಸಂಘಟಕ ಜೋಕಿಂ ಡಿಸೋಜ, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ದಾಸಪ್ಪ ರೈ, ತಾಪಂ ಮಾಜಿ ಸದಸ್ಯೆ ರೊಹರಾ ನಿಸಾರ್, ಬೂಡು ವಿಶ್ವನಾಥ ರೈ, ಅಮ್ಮಣ್ಣ ರೈ, ಶಿವನಾಥ ರೈ ಮೇಗಿನಗುತ್ತು, ಶ್ರೀರಾಂ ಪಕ್ಕಳ, ಕೃಷ್ಣಪ್ರಸಾದ್ ಆಳ್ವ, ಸೂತ್ರಬೆಟ್ಟು ಜಗನ್ನಾಥ ರೈ, ಬೂಡಿಯಾರು ಪುರುಷೋತ್ತಮ ರೈ ಮತ್ತಿತರರು ಉಪಸ್ಥಿತರಿದ್ದರು.