×
Ad

ಮಧ್ವ ಸರೋವರಕ್ಕೆ ನೀರು ಶುದ್ಧೀಕರಣ ಯಂತ್ರ ಅಳವಡಿಕೆ

Update: 2016-04-09 23:51 IST

ಉಡುಪಿ, ಎ.9: ಕಲುಷಿತಗೊಂಡಿರುವ ಶ್ರೀಕೃಷ್ಣ ಮಠದ ಅತ್ಯಂತ ಪುರಾತನ ಮಧ್ವ ಸರೋವರಕ್ಕೆ ಪುಣೆಯ ಜೋಶಿ ಅಗ್ರೊ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಪ್ರವೀಣ್ ಜೋಶಿ ಕೊಡುಗೆಯಾಗಿ ನೀಡಿರುವ ನೀರು ಶುದ್ಧೀಕರಣದ ಯಂತ್ರ ವನ್ನು ಅಳವಡಿಸಲಾಯಿತು.

ಇದರ ಉದ್ಘಾಟನೆಯನ್ನು ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಶನಿವಾರ ನೆರವೇರಿಸಿದರು.

ಭಕ್ತರು ಹಾಗೂ ಪೂಜಾರಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸರೋವರದ ನೀರು ನಿರ್ಮಲವಾಗುವಂತಹ ದೊಡ್ಡ ಸೇವೆಯನ್ನು ನೀಡಲಾಗಿದ್ದು, ಮುಂದೆ ಇದರ ಪ್ರಯೋಜನ ವನ್ನು ಎಲ್ಲರೂ ಪಡೆದುಕೊಳ್ಳ ಲಿದ್ದಾರೆ ಎಂದು ಪೇಜಾವರ ಶ್ರೀ ಹೇಳಿದರು.

ಪ್ರವೀಣ್ ಜೋಶಿ ಮಾತನಾಡಿ, ಈ ಯಂತ್ರವನ್ನು ನಮ್ಮ ಕೈಗಾರಿಕೆಯಲ್ಲೇ ತಯಾರಿಸ ಲಾಗುತ್ತಿದೆ. ಈ ಫಿಲ್ಟ್ರೇಶನ್‌ನಲ್ಲಿ ಮೂರು ತಂತ್ರಜ್ಞಾನವಿದ್ದು, ಸೈಕ್ಲೋನ್ ಟೆಕ್ನಾಲಜಿ, ಸ್ಯಾಂಡ್ ಫಿಲ್ಟರ್ ಟೆಕ್ನಾಲಜಿ ಹಾಗೂ ಡಿಸ್ಕ್ ಫಿಲ್ಟ್ರೇಶನ್ ಮೂಲಕ ನೀರು ಹಾಯ್ದು ಕೊಳಚೆ ಯನ್ನು ಬೇರ್ಪಡಿಸಿ ಸಂಪೂರ್ಣ ಶುದ್ಧ ಮಾಡಲಾಗುತ್ತದೆ. ಸುಮಾರು 2 ಲಕ್ಷ ರೂ. ವೆಚ್ಚದ ಯಂತ್ರವನ್ನು ಮಠಕ್ಕೆ ಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.

ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ದೇವರ ಪೂಜೆ ಅಭಿಷೇಕಕ್ಕೆ ಈ ನೀರನ್ನು ಬಳಸಲಾಗುವುದಿಲ್ಲ. ಸ್ನಾನಕ್ಕೆ ಮಾತ್ರ ಈ ಸರೋವರವನ್ನು ಉಪಯೋಗಿಸಲಾಗು ತ್ತದೆ. ತೆಪ್ಪೋತ್ಸವ, ಶ್ರೀ ಕೃಷ್ಣಾಷ್ಟಮಿ, ಲಕ್ಷದೀಪೋ ತ್ಸವದ ದಿನಗಳಲ್ಲಿ ಈ ಸರೋವರವನ್ನು ಬಳಲಾಗುತ್ತಿದ್ದು, ಆದ್ದರಿಂದ ಇದಕ್ಕೆ ಹೆಚ್ಚಿನ ಮಹತ್ವ ಇದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News