×
Ad

ಉಪನ್ಯಾಸಕರ ಬೇಡಿಕೆಗಳಿಗೆ ಸರಕಾರ ಎ.12 ಅಥವಾ ಎ.13ರಂದು ಅಂತಿಮ ನಿರ್ಧಾರ :ಕಿಮ್ಮನೆ

Update: 2016-04-10 14:05 IST

ಬೆಂಗಳೂರು, ಎ.10: ಮೌಲ್ಯ ಮಾಪನ ಬಹಿಷ್ಕರಿಸಿರುವ ಪಿಯು ಉಪನ್ಯಾಸಕರ ಜೊತೆ ಸರಕಾರ ಇಂದು ನಡೆಸಿದ ನಾಲ್ಕನೆ ಸುತ್ತಿನ ಮಾತುಕತೆ ವಿಫಲವಾಗಿದ್ದು, ಉಪನ್ಯಾಸಕರ ಬೇಡಿಕೆಗಳಿಗೆ ಎಪ್ರಿಲ್‌ 12 ಅಥವಾ 13ರಂದು ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ತಿಳಿಸಿದ್ದಾರೆ.
ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸಲು ಸಾಧ್ಯವಿಲ್ಲ. ಎಲ್ಲ ಇಲಾಖೆಗಳ ನೌಕರರ ವೇತನದಲ್ಲೂ ತಾರತಮ್ಯ ಇದೆ ಎಂದು ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ.
 ಪಿಯು ಉಪನ್ಯಾಸಕರು   ಧರಣಿ ಮುಂದುವರಿಸಿದ್ದಾರೆ. ಮುಂದೆ ಸರಕಾರ ತಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲಿ ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News