×
Ad

ಎನ್‌ಐಟಿ ವಿದ್ಯಾರ್ಥಿಗಳನ್ನು ಭೇಟಿಯಾಗಲು ಹೋಗುತ್ತಿದ್ದ ಅನುಪಮ್‌ಖೇರ್‌ರನ್ನು ಏರ್‌ಪೋರ್ಟ್‌ನಲ್ಲಿ ತಡೆದ ಪೊಲೀಸರು

Update: 2016-04-10 14:24 IST

ಶ್ರೀನಗರ, ಎಪ್ರಿಲ್.10: ಶ್ರೀನಗರದ ಎನ್‌ಐಟಿ ವಿದ್ಯಾರ್ಥಿಗಳನ್ನು ಭೇಟಿಯಾಗಲು ತೆರಳುತ್ತಿದ್ದ ನಟ ಅನುಪ್‌ಖೇರ್‌ರನ್ನು ರವಿವಾರ ಬೆಳಗ್ಗೆ ಪೊಲೀಸರು ವಿಮಾನನಿಲ್ದಾಣದಲ್ಲಿ ತಡೆಹಿಡಿದರೆಂದು ವರದಿಯಾಗಿದೆ. ಪೊಲೀಸರು ಎನ್‌ಐಟಿ ಹೋಗಬಾರದೆಂದು ತಿಳಿಸಿದ್ದಾರೆ. ಇದಕ್ಕಿಂತ ಮೊದಲು ಅನುಪಮ್ ಖೇರ್ ಹೇಳಿದ್ದರು "ಶ್ರೀನಗರದ ಎನ್‌ಐಟಿ ವಿದ್ಯಾರ್ಥಿಗಳಿಗೆ ಸಮರ್ಥನೆ ನೀಡುವು ಅತ್ಯಂತ ಅಗತ್ಯವಾಗಿದೆ. ಮತ್ತು ಭಾರತೀಯ ನಾಗರಿಕನಾಗಿ ಎನ್‌ಐಟಿ ವಿದ್ಯಾರ್ಥಿಗಳನ್ನು ಭೇಟಿಯಾಗಲು ಶ್ರೀನಗರ ಹೋಗುತ್ತಿದ್ದೇನೆ" ಎಂದು ಹೇಳಿದ್ದರು.

ಮಾರ್ಚ್ 31ರಂದು ಎನ್‌ಐಟಿ ಕ್ಯಾಂಪಸ್‌ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್‌ಮ್ಯಾಚ್‌ನಲ್ಲಿ ಭಾರತ ಸೋಲನುಭವಿಸಿದಾಗ ಕಾಶ್ಮೀರಿ ವಿದ್ಯಾರ್ಥಿಗಳು ಭಾರತ ವಿರೋಧಿ ಮತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಕಾಶ್ಮೀರಿ ವಿದ್ಯಾರ್ಥಿಗಳು ಮೊದಲವರ್ಷದ ಕೆಲವು ವಿದ್ಯಾರ್ಥಿಗಳನ್ನು ಥಳಿಸಿದ್ದರು. ಆದ ಕಾರಣ ಕಾಶ್ಮೀರೇತರ ವಿದ್ಯಾರ್ಥಿಗಳು ಕಾಶ್ಮೀರಿ ವಿದ್ಯಾರ್ಥಿಗಳನ್ನು ಥಳಿಸಿ ರಾಷ್ಟ್ರಗೀತೆ ಹಾಡಿ ಕ್ಯಾಂಪಸ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದರು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News