×
Ad

ಅಧಿಕಾರಕ್ಕೆ ಮರಳಿದರೆ ತಮಿಳ್ನಾಡಿನಲ್ಲಿ ಪಾನ ನಿಷೇಧ ಜಾರಿಗೊಳಿಸಲಾಗುವುದು: ಜಯಲಲಿತಾ ಹೇಳಿಕೆ

Update: 2016-04-10 14:29 IST

ಚೆನೈ, ಎಪ್ರಿಲ್.10: ತಮಿಳ್ನಾಡಿನ ಮುಖ್ಯಮಂತ್ರಿ ಮತ್ತು ಎಐಡಿಎಂಕೆ ಅಧ್ಯಕ್ಷೆ ಜಯಲಲಿತಾ ಶನಿವಾರ ಚುನಾವಣಾ ಅಭಿಯಾನದ ಆರಂಭದ ಪ್ರಯುಕ್ತ ಚೆನ್ನೈಯಲ್ಲಿ ಅನೇಕ ಭರವಸೆಯನ್ನು ನೀಡಿದ್ದು ಇದರಲ್ಲಿ ಶರಾಬು ಮಾರಾಟವನ್ನು ತಡೆಯುವುದೂ ಸೇರಿದೆಯೆಂದು ವರದಿಗಳು ತಿಳಿಸಿವೆ.

ತನ್ನ ಉತ್ತಮ ಆಡಳಿತದ ಕುರಿತು ಹೇಳುತ್ತಾ ತಾನು ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅಮ್ಮಾ ಕ್ಯಾಂಟಿನ್. ಅಮ್ಮಾ ಫಾರ್ಮಸಿ ಅಮ್ಮಾ ಉಪ್ಪು ನೀಡಿರುವುದನ್ನು ಹೇಳಿದ ಅವರು ಒಂದು ಕಾಲದಲ್ಲಿ ಜನರಿಗೆ ಕೆಲಸ ಇರಲಿಲ್ಲ. ವಿದ್ಯುತ್ ಸಮಸ್ಯೆ ಇತ್ತು ಇವೆಲ್ಲವೂ ಇಂದು ಸರಿಯಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಶರಾಬು ಮಾರಟವನ್ನು ನಿಷೇಧಿಸಲಾಗುವುದು ಎಂದಿರುವ ಜಯಲಲಿತಾ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಗೆ ಕೈಗೊಂಡ ಕ್ರಮವನ್ನು ವಿವರಿಸಿದ್ದಾರೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಪಾನ ನಿಷೇಧ ಜಾರಿಗೆ ತಂದ ನಂತರ ಇದೀಗ ತಮಿಳ್ನಾಡಿನಲ್ಲಿಯೂ ಈ ಧ್ವನಿ ಕೇಳಿಸಲಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News