×
Ad

ಅಗ್ನಿ ದುರಂತ; ಕ್ರೈಮ್‌ ಬ್ರಾಂಚ್‌ನಿಂದ ತನಿಖೆಗೆ ಕೇರಳ ಸಚಿವ ಸಂಪುಟ ಸಭೆ ನಿರ್ಧಾರ

Update: 2016-04-10 15:05 IST

ಕೊಲ್ಲಂ, ಎ.14: ಪಾರವೂರ್ ನಲ್ಲಿರುವ ಮೂಕಾಂಬಿಕ ದೇಗುಲದ ವಾರ್ಷಿಕೋತ್ಸವ ವೇಳೆ ಸಂಭವಿಸಿದ ಅಗ್ನಿ ದುರಂತ ಪ್ರಕರಣದ ಬಗ್ಗೆ ಕ್ರೈಂ ಬ್ರಾಂಚ್‌ನಿಂದ ತನಿಖೆ ನಡೆಸುವ ನಿರ್ಧಾರವನ್ನು ಕೇರಳ ಸಚಿವ ಸಂಪುಟ ಸಭೆ  ಕೈಗೊಂಡಿದೆ.
 ಮುಖ್ಯ ಮಂತ್ರಿ ಉಮನ್‌ ಚಾಂಡಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ.

ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡಲಿದೆ. ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News