ಮಂಗಳೂರು : ಜುಲೇಖಾ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆರೋಗ್ಯ ದಿನ ಆಚರಣೆ
ಮಂಗಳೂರು,ಎ.10: ಜುಲೇಖಾ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆರೋಗ್ಯ ದಿನವನ್ನು ಇತ್ತೀಚೆಗೆ ಕೊಡಿಯಾಲ್‌ಬೈಲ್ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು. 2016ನೇ ವಿಶ್ವ ಆರೋಗ್ಯ ದಿನದ ಥೀಮ್ ಹಾಲ್ಟ್ ದ ರೈಜ್ ಬೀಟ್ ಡಯಾಬಿಟಿಸ್ ಎಂಬ ವಿಷಯವನ್ನು ಪ್ರದರ್ಶಿಸಲಾಯಿತು. ಜುಲೇಖಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಆರ್. ಕನಕವಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜುಲೇಖಾ ನರ್ಸಿಂಗ್ ಕಾಲೇಜಿನ ದ್ವಿತೀಯ ವರ್ಷದ ಎಂ.ಎಸ್ಸಿ ವಿದ್ಯಾರ್ಥಿಗಳು, ತೃತೀಯ ವರ್ಷದ ಬಿ.ಎಸ್ಸಿ ಹಾಗೂ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳು ಮಧುಮೇಹ ರೋಗದ ಬಗ್ಗೆ ಬೊಂಬೆ ಪ್ರದರ್ಶನ ಹಾಗೂ ಮಧುಮೇಹ ರೋಗದ ಮಾದರಿಗಳನ್ನು ರಚಿಸಿ ಜನರಿಗೆ ರೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ರೋಗಿಗಳು ಇನ್‌ಸುಲಿನ್ ಸ್ವಯಂ ಹೇಗೆ ಬಳಸಬಹುದು ಎಂಬುದನ್ನು ಪ್ರದರ್ಶಿಸಿದರು. ಜುಲೇಖಾ ನರ್ಸಿಂಗ್ ಕಾಲೇಜಿನ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಜಿ. ಪ್ರತಿಭಾ ಸ್ವಾಗತಿಸಿದರು. ಅಂತಿಮ ವರ್ಷದ ಎಂ.ಎಸ್ಸಿ ವಿದ್ಯಾರ್ಥಿನಿ ನೀಶಾವಂದಿಸಿದರು.