×
Ad

ಸುಮಾತ್ರ ದ್ವೀಪದಲ್ಲಿ ಭೂಕಂಪ

Update: 2016-04-10 23:49 IST

ಜಕಾರ್ತ, ಎ.10: ಇಂಡೋನೇಶ್ಯದ ಸುಮಾತ್ರ ದ್ವೀಪದ ಪಶ್ಚಿಮ ಕರಾವಳಿಯ ಬೆಂಗ್‌ಕುಲು ರಾಜ್ಯದಲ್ಲಿ ರವಿವಾರ ರಿಕ್ಟರ್ ಮಾಪಕದಲ್ಲಿ 5.9ರ ತೀವ್ರತೆಯ ಭೂಕಂಪ ಸಂಭವಿಸಿದೆ.
ಬೆಳಗ್ಗೆ 9:14ಕ್ಕೆ ಭೂಕಂಪ ಸಂಭವಿಸಿತು ಎಂದು ಇಂಡೋನೇಶ್ಯದ ಭೂಕಂಪ ನಿಗಾ ಕೇಂದ್ರ ಹೇಳಿದೆ.
ಭೂಕಂಪದ ಕೇಂದ್ರ ಬಿಂದು ಬೆಂಗ್‌ಕುಲು ನಗರದ ನೈರುತ್ಯದಲ್ಲಿ 61 ಕಿ.ಮೀ. ದೂರದಲ್ಲಿತ್ತು. ಸಮುದ್ರ ತಳದಿಂದ 55.3 ಕಿ.ಮೀ. ಆಳದಲ್ಲಿ ಸಂಭವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News