×
Ad

ಕೇರಳ ದುರ್ಘಟನೆ: ತನಿಖೆಗೆ ಪೇಜಾವರ ಶ್ರೀ ಆಗ್ರಹ

Update: 2016-04-10 23:58 IST

ಉಡುಪಿ, ಎ.10: ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪುತ್ತಿಂಗಲ್‌ನ ದೇವಿ ದೇವಸ್ಥಾನದ ಜಾತ್ರೆಯಲ್ಲಿ ನಡೆದ ಸಿಡಿಮದ್ದು ದುರ್ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಉಡುಪಿ ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಘಟನೆಯ ಬಗ್ಗೆ ಶೀಘ್ರ ತನಿಖೆ ನಡೆಸುವಂತೆ ಕೇರಳ ಸರಕಾರವನ್ನು ಒತ್ತಾಯಿಸಿದ್ದಾರೆ.

ಜಾತ್ರೆಯ ಸಂಭ್ರಮ ಸೂತಕದ ದುಃಖಕ್ಕೆ ಕಾರಣವಾಗಿರುವುದು ತೀರಾ ಬೇಸರ ತಂದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News