ಉಚಿತ ಸಿಇಟಿ ಕೋಚಿಂಗ್, ವೃತ್ತಿ ಮಾರ್ಗದರ್ಶನ
ಮಂಗಳೂರು, ಎ. 11: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಪ್ರಿಲ್ 13ರಿಂದ 30ರವರೆಗೆ ಉಚಿತ ಸಿಇಟಿ ಕೋಚಿಂಗ್, ವೃತ್ತಿ ಮಾರ್ಗದರ್ಶನ ಮತ್ತು ಬಿಐಟಿ ಟ್ಯಾಲೆಂಟ್ ಹಂಟ್- 2016ನ್ನು ಹಮ್ಮಿಕೊಳ್ಳಲಾಗಿದೆ.
ಸಿಇಟಿಯಲ್ಲಿ ಅಧಿಕ ಅಂಕಗಳನ್ನು ಗಳಿಸಬೇಕಾದಲ್ಲಿ ತಜ್ಞರಿಂದ ಉಚಿತ ಸಿಇಟಿ ಕೋಚಿಂಗ್‌ಗಾಗಿ, ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಗೊಂದಲವಿದ್ದಲ್ಲಿ ಉಚಿತ ವೃತ್ತಿ ಮಾರ್ಗದರ್ಶನ ಸಲಹೆ ಪಡೆಯಲು ಎಸ್‌ಎಂಎಸ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ವಿದ್ಯಾರ್ಥಿಯ ಹೆಸರು, ಊರು ಮತ್ತು ಕಾಲೇಜಿನ ಹೆಸರನ್ನು 9880641681, 9900066888, 9844535720 ಈ ಸಂಖ್ಯೆಗೆ ಎಸ್‌ಎಂಎಸ್ ಮಾಡಬಹುದು.
ಶಿಬಿರದ ಅಂತ್ಯದಲ್ಲಿ ಸಿಇಟಿ ಪ್ರತಿಭಾ ಅಣುಕು ಪರೀಕ್ಷೆಯಲ್ಲಿ ಭಾಗವಹಿಸಿ ಶೇ. 100ರಷ್ಟು ವಿದ್ಯಾರ್ಥಿವೇತನಗಳನ್ನು ಪಡೆಯುವ ಅವಕಾಶವೂ ಇದೆ.
ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಯ ದ್ವಿತೀಯ ಪಿಯುಸಿ ವಿದಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ ಎಂದು ಬಿಐಟಿ ಪ್ರಕಟನೆ ತಿಳಿಸಿದೆ.