ಪುತ್ತೂರು: ಸೇತುವೆಯಿಂದ ಪಲ್ಟಿಯಾದ ಓಮ್ನಿ, ಚಾಲಕ ಪ್ರಾಣಾಪಾಯದಿಂದ ಪಾರು
Update: 2016-04-11 19:25 IST
ಪುತ್ತೂರು: ಓಮ್ಮಿ ಕಾರೊಂದು ಸೇತುವೆಯಿಂದ ಕೆಳಕ್ಕೆ ಬಿದ್ದು ಚಾಲಕ ಗಾಯಗೊಂಡ ಘಟನೆ ಸೋಮವಾರ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಬೈಲಾಡಿ ಎಂಬಲ್ಲಿ ನಡೆದಿದೆ. ಘಟನೆಯಿಂದ ಓಮ್ಮಿ ನಜ್ಜುಗುಜ್ಜಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದದಾರೆ. ಬೈಲಾಡಿ ಸೇತುವೆ ಮೇಲಿಂದ ಓಮ್ನಿ ಕಾರು ಕೆಳಕ್ಕೆ ಬಿದ್ದಿದೆ. ಮರ್ದಾಳ ನಿವಾಸಿ ರಾಧಾಕೃಷ್ಣ ಭಟ್ ಅವರು ತಮ್ಮ ಓಮ್ಮಿ ಕಾರಿನಲ್ಲಿ ಪಾಣಾಜೆಗೆ ತೆರಳುತ್ತಿದ್ದು, ಕಾರು ಸೇತುವೆ ಮೇಲಿಂದ ಸುಮಾರು 70 ಅಡಿ ಆಳಕ್ಕೆ ಬಿದ್ದಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿ ಅವರೊಬ್ಬರೇ ಇದ್ದರು. ಗಾಯಾಳು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.