×
Ad

ಉಳ್ಳಾಲ : ಜಗತ್ತಿನ ಎಲ್ಲಾ ಮುಸ್ಲಮಾನನಿಗೆ ಇಸ್ಲಾಂ ಧರ್ಮದ ನಿಯಮಗಳು ಒಂದೆಯಾಗಿದೆ - ಫಝಲ್ ಕೋಯಮ್ಮ ತಂಙಳ್ ಕೂರ

Update: 2016-04-11 19:35 IST

ಉಳ್ಳಾಲ. ಎ, 11: ಜಗತ್ತಿನ ಎಲ್ಲಾ ಮುಸ್ಲಮಾನನಿಗೆ ಇಸ್ಲಾಂ ಧರ್ಮದ ನಿಯಮಗಳು ಒಂದೆಯಾಗಿದೆ ಎಂದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ಅಭಿಪ್ರಾಯಪಟ್ಟರು. ಅವರು ಸೋಮವಾರ ಇರಾ ಸಂಪಿಲ ಮುಹಿಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆದ ಖಾಝಿ ಸ್ವೀಕಾರ ಕಾರ್ಯಕ್ರಮದಲ್ಲಿ ಖಾಝಿ ಅಧಿಕಾರ ಸ್ವೀಕಾರಿಸಿ ಮಾತನಾಡಿದರು.
ಖಾಝಿಯಗಲಿ, ಮಸೀದಿಯ ಗುರುಗಳಾಗಲಿ ಎಲ್ಲರಿಗೂ ಇಸ್ಲಾಂ ಧರ್ಮದ ನಿಯಮಗಳು ಸಮಾನವಾಗಿದ್ದು ಎಲ್ಲರೂ ಖಾಝಿಯ ನಿಯಮವಲ್ಲ ಇದು ಅಲ್ಲಾಹನ ನಿಯಮವಾಗಿದೆ ಎಂದರು.
ಮುಡಿಪು ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಶರಫುಲ್ ಉಲಮಾ ಪಿ.ಎಂ ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮಂಜಪಾರೆ ಮಜ್ಲಿಸ್ ಅಧ್ಯಕ್ಷ ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಆದೂರು ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದರು.
ಈ ಸಂದರ್ಭ 25 ವರ್ಷಗಳ ಧೀರ್ಘ ಕಾಲ ಇರಾ ಮುಹಿಯದ್ದೀನ್ ಜುಮಾ ಮಸೀದಿ ಸೇವೆಸಲ್ಲಿಸಿದ ಬಿ.ಎಸ್ ಇಬ್ರಾಹೀಂ ಸಖಾಫಿಯನ್ನು ಜಮಾಅತ್ ಮತ್ತು ಊರಿನ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಯಿತು. ಜಾಮಿಅ ಸಅದಿಯ್ಯದ ಪ್ರೋಫೆಸರ್ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಮುಖ್ಯ ಪ್ರಭಾಷಣ ಮಾಡಿದರು.
ಅಸ್ಸಯ್ಯದ್ ಇಬ್ರಾಹೀಂ ಪೊಕುಂಞ ತಂಙಳ್ ಉದ್ಯಾವರ, ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಉದ್ಯಾವರ, ಇಬ್ರಾಹೀಂ ಮದನಿ ಮಂಚಿ ಉಸ್ತಾದ್, ಬಾಳೆಪುಣಿ ಮುದರ್ರಿಸ್ ಮುಹಮ್ಮದಾಲಿ ಫೈಯಿ, ದಾರುಲ್ ಅಶ್-ಅರಿಯ್ಯಿ ಮ್ಯಾನೇಜರ್ ಮುಹಮ್ಮದಾಲಿ ಸಖಾಫಿ, ಮಾಜಿ ಜಿ.ಪಂ ಸದಸ್ಯ ಸಂತೋಷ್ ಕುಮರ್ ರೈ, ತಾ.ಪಂ ಸದಸ್ಯ ಚಂದ್ರಹಾಸ್ ಕರ್ಕೇರ, ಇರಾ ಗ್ರಾ.ಪಂ ಅಧ್ಯಕ್ಷ ಕೆ.ಅಬ್ದುಲ್ ರಝಾಕ್ ಕುಕ್ಕಾಜೆ, ಮುಡಿಪು ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್.ಕೆ ಅಬ್ದುಲ್ ಖಾದರ್ ಹಾಜಿ, ವಕ್ಫ್ ಬೋರ್ಡ್ ಉಪಾಧ್ಯಕ್ಷ ಎಸ್.ಅಬೂಬಕ್ಕರ್ ಹಾಜಿ, ಎಸ್‌ಜೆಎಂ ಮುಡಿಪು ರೇಂಜ್ ಅಧ್ಯಕ್ಷ ಕೆ.ಬಿ ಅಬ್ದುರ್ರಹ್ಮಾನ್ ಮದನಿ, ಎಸ್‌ವೈಎಸ್ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಪೊಯ್ಯತ್ತಬೈಲ್ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ, ಕೋಡಿಜಾಲ್ ಖತೀಬ್ ಅಬೂಬಕ್ಕರ್ ಸಖಾಫಿ, ಪರಪ್ಪು ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸಖಾಫಿ, ಮೌಲಾ ನಗರ ಖತೀಬ್ ಸಿ.ಎಚ್ ಖಾಸಿಂ ಮದನಿ, ಮೋಂತಿಮಾರ್ ಪಡ್ಪು ಖತೀಬ್ ಅಬ್ದುಲ್ಲಾ ಸಅದಿ, ಸಿರಜುಲ್ ಹುದಾ ಸೈಟ್ ಮದರಸದ ಕೆ.ಮುಹಮ್ಮದ್ ಸಖಾಫಿ, ಮುಹಿಯದ್ದೀನ್ ಜುಮಾ ಮಸೀದಿ ಮುಹಲ್ಲೀಂ ಎಂ.ಎಸ್ ಇಬ್ರಾಹೀಂ ಸಖಾಫಿ, ಮುಅದ್ದೀನ್ ಶಫೀಖ್ ಮೌಲವಿ, ಪಂಜಿಕ್ಕಲ್ ಖತೀಬ್ ಅಬೂಬಕ್ಕರ್ ಮದನಿ, ಕಾರ್ಯದರ್ಶಿ ಅಬ್ಬಾಸ್ ಮದನಿ, ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಮದನಿ, ಮುಹಿಯದ್ದೀನ್ ಜುಮಾ ಮಸೀದಿ ಉಪಾಧ್ಯಕ್ಷ ಟಿ.ಇಬ್ರಾಹೀಂ, ಉಮಿಯತ್ತಡ್ಕ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್, ಎಸೈವೈಎಸ್ ಮುಖಂಡ ಕೆ.ಇ ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
 ಇರಾ ಸಂಪಲ ಮುಹಿಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಸ್.ಎ ಇಬ್ರಾಹೀಂ ಮುಸ್ಲಿಯಾರ್ ಸ್ವಾಗತಿಸಿದರು. ಬಿ.ಎಚ್ ಮುಸ್ತಫ ಮುಸ್ಲಿಯರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News