ಉಳ್ಳಾಲ: ಮುಂಬರುವ ಚುನಾವಣೆಯಲ್ಲಿ ರಾಜ್ಯಾದ್ಯಂತ ಅಭೂತಪೂರ್ವ ಗೆಲುವನ್ನು ಪಕ್ಷ ಸಾಧಿಸಲಿದೆ - ಕೆ.ರವೀಂದ್ರ ಶೆಟ್ಟಿ
ಉಳ್ಳಾಲ: ಮಾಜಿ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ರಾಜಾಧ್ಯಕ್ಷರು ಆಗುವ ಮೂಲಕ ಪಕ್ಷಕ್ಕೆ ಬಲ ಬಂದಂತಾಗಿದ್ದು, ಮುಂಬರುವ ಚುನಾವಣೆಯಲ್ಲಿ ರಾಜ್ಯಾದ್ಯಂತ ಅಭೂತಪೂರ್ವ ಗೆಲುವನ್ನು ಪಕ್ಷ ಸಾಧಿಸಲಿದೆ ಎಂದು ರತ್ನ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಹೇಳಿದ್ದಾರೆ. ಅವರು ಯಡಿಯೂರಪ್ಪ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾದ ಹಿನ್ನೆಲೆಯಲ್ಲಿ ಅಸೈಗೋಳಿಯ ಅಭಯಾಶ್ರಮ ವಾಸಿಗಳಿಗೆ ಸಿಹಿತಿಂಡಿ ಮತ್ತು ಹಣ್ಣುಹಂಪಲುಗಳನ್ನು ವಿತರಿಸಿ ಮಾತನಾಡಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು. ಪಕ್ಷದ ಉಳಿವಿಗಾಗಿ ಶ್ರಮ ಪಟ್ಟವರು. ಇದೀಗ ಮತ್ತೆ ರಾಜ್ಯಾಧ್ಯಕ್ಷರಾಗುವ ಮೂಲಕ ರಾಜ್ಯದ ಬಿಜೆಪಿಗೆ ಬಲ ಬಂದಂತಾಗಿದ್ದು, ಶೀಘ್ರವೇ ವಿರೋಧ ಪಕ್ಷಗಳ ಕರ್ಮಕಾಂಡಗಳನ್ನು ಹೊರಗೆಳೆಯಲಿದ್ದಾರೆ ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿ.ಪಂ ಮಾಜಿ ಸದಸ್ಯೆ ಸುಷ್ಮಾ ಜನಾರ್ದನ್, ತಾ.ಪಂ ಮಾಜಿ ಸದಸ್ಯೆ ರಾಜೀವಿ ಕೆಂಪುಮಣ್ಣು, ನಾರಾಯಣ ಕುಂಪಲ, ಜೀವನ್ ಕುಮಾರ್ ತೊಕ್ಕೊಟ್ಟು, ಹರಿಯಪ್ಪ ಸಾಲ್ಯಾನ್, ಪ್ರಕಾಶ್ ಸಿಂಫೋನಿ, ಸನತ್, ಪಾರ್ಥಸಾರಥಿ, ಬಾಬು ಶೆಟ್ಟಿ, ಅಶ್ರಫ್ ಹರೇಕಳ, ಮಹಮ್ಮದ್ ಅಝ್ಗರ್, ಅನ್ಸಾಫ್, ಸುಜಿತ್ ಮಾಡೂರು, ಕಿಶೋರ್ ಮುನ್ನೂರು, ಆನಂದ ಶೆಟ್ಟಿ, ಸುರೇಶ್ ಅಂಬ್ಲಮೊಗರು, ರವಿ ಅಸೈಗೋಳಿ, ರವಿ ರೈ ಮೊದಲಾದವರು ಉಪಸ್ಥಿತರಿದ್ದರು.