ಕೊಲ್ಲಂ ಬೆಂಕಿ ಅನಾಹುತ ಸಂತ್ರಸ್ತರಿಗೆ ಯುವರಾಜ ವಿಲಿಯಂ ಸಂತಾಪ
Update: 2016-04-11 23:45 IST
ಮುಂಬೈ, ಎ.11: ನೂರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ಕೇರಳದ ಕೊಲ್ಲಂ ಜಿಲ್ಲೆಯ ದೇವಾಲಯವೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತದ ಬಗ್ಗೆ ಭಾರತದ ಪ್ರವಾಸದಲ್ಲಿರುವ ಕೇಂಬ್ರಿಜ್‌ನ ಯುವರಾಜ ವಿಲಿಯಂ ರವಿವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಂಬೈಯಲ್ಲಿ ನಿನ್ನೆ ಪ್ರಸಿದ್ಧ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಬಾಲಿವುಡ್ ಗಾಲಾ ನೈಟ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಲಿಯಂ, ‘‘ನಾನು ಆರಂಭಿಸುವ ಮೊದಲು ಕ್ಯಾಥರಿಸ್ ಹಾಗೂ ನಾನು, ಕೊಲ್ಲಂನ ದೇವಾಲಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಸಂತ್ರಸ್ತರಾದವರೆಲ್ಲರಿಗೂ ನಮ್ಮ ಸಂತಾಪ ವ್ಯಕ್ತಪಡಿಸಲು ಬಯಸುತ್ತೇವೆ. ಈ ಕೊಠಡಿಯಲ್ಲಿರುವ ನೀವೆಲ್ಲರೂ ಈ ಭಾವನಾತ್ಮಕ ವಿಷಯದಲ್ಲಿ ನಮ್ಮ ಜೊತೆ ಸೇರಿಸಿಕೊಳ್ಳುವಿರೆಂಬುದು ನನಗೆ ತಿಳಿದಿದೆ’’ ಎಂದರು.
ವಿಲಿಯಂ ಹಾಗೂ ಅವರ ಪತ್ನಿ ಕೇಟ್ ಮಿಡ್ಲ್‌ಟನ್, ವ್ಯಾಪಾರ ಹಾಗೂ ಬಾಲಿವುಡ್‌ನ ಕೆಲವು ಖ್ಯಾತ ನಾಮರೊಂದಿಗೆ ವೈಭವೋಪೇತ ಸತ್ಕಾರ ಕೂಟವೊಂದರಲ್ಲಿ ಭಾಗವಹಿಸಿದರು.