ಸುಳ್ಯ: ನೂತನ ಸರ್ಕಲ್ ಇನ್ಸ್‌ಪೆಕ್ಟರ್ ವಿ.ಕೃಷ್ಣಯ್ಯ ಅಧಿಕಾರ ಸ್ವೀಕಾರ
Update: 2016-04-12 17:13 IST
ಸುಳ್ಯ: ಸುಳ್ಯ ಪೊಲೀಸ್ ವೃತ್ತದ ನೂತನ ಇನ್ಸ್‌ಪೆಕ್ಟರ್ ಆಗಿ ವಿ.ಕೃಷ್ಣಯ್ಯ ಅಧಿಕಾರ ಸ್ವೀಕರಿಸಿದ್ದಾರೆ.
ಬೆಂಗಳೂರು ಚನ್ನಪಟ್ಟಣದಲ್ಲಿರುವ ಕರ್ನಾಟಕ ಪೋಲೀಸ್ ತರಬೇತಿ ಶಾಲೆಯಲ್ಲಿ ಪೋಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಕೃಷ್ಣಯ್ಯ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಮೈಸೂರಿನ ಗಾಯತ್ರಿಪುರದವರಾದ ಕೃಷ್ಣಯ್ಯರವರು ಬಿ.ಎ. ಪದವೀಧರರು. ಸಬ್‌ಇನ್‌ಸ್ಪೆಕ್ಟರ್ ಆಗಿ ಶಿವಮೊಗ್ಗ ಜಿಲ್ಲೆಯ ಸಾಗರ, ಭದ್ರಾವತಿ, ಶಿಕಾರಿಪುರ, ಉತ್ತರ ಕನ್ನಡದ ಕಾರವಾರ ಮೊದಲಾದೆಡೆ ಸೇವೆ ಸಲ್ಲಿಸಿ ಬಳಿಕ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಭಡ್ತಿ ಪಡೆದು ಚಾಮರಾಜನಗರ, ಸೋಮವಾರಪೇಟೆಗಳಲ್ಲಿ ಸೇವೆ ಸಲ್ಲಿಸಿ, ಬಳಿಕ ಚನ್ನಪಟ್ಟಣದ ಪೋಲೀಸ್ ತರಬೇತಿ ಶಾಲೆಗೆ ಹೋಗಿದ್ದರು. ಈಗ ಅಲ್ಲಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ.