×
Ad

ಹೊಳೆಗೆ ಸ್ನಾನಕ್ಕಿಳಿದ ಮದ್ರಸ ವಿದ್ಯಾರ್ಥಿಗಳಿಬ್ಬರು ಮೃತ್ಯು

Update: 2016-04-12 17:45 IST

ಕಾಸರಗೋಡು : ಹೊಳೆಗೆ ಸ್ನಾನಕ್ಕಿಳಿದ ಇಬ್ಬರು ಮದ್ರಸ ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ  ಬೇಡಡ್ಕ ಕುಂಡಗುಯಿ ಯಲ್ಲಿ  ನಡೆದಿದೆ. ಜೊತೆಗಿದ್ದ ಐದು ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಮ್ರತಪಟ್ಟ ವರನ್ನು    ಕೇಳತ್ತೂರು ಕಲ್ಲಡಕುಟ್ಟಿಯ   ಅಬ್ದುಲ್ಲ ರವರ ಪುತ್ರ ಜಾಬಿರ್ ( 12 ) ಮತ್ತು   ಕೋಜಿಕ್ಕೋಡು ರಾಮನಟಕರದ   ಅಬೂಬಕ್ಕರ್ ರವರ ಪುತ್ರ  ಜೈನುಲ್ ಆಬಿದ್ ( 20 ) ಎಂದು ಗುರುತಿಸಲಾಗಿದೆ .
ಜಾಬಿರ್  ಕೋಜಿಕ್ಕೋಡು ಓಮನಶ್ಯೇರಿ ದಾರುಲ್ ಹರ್ಖಾ ಜೂನಿಯರ್ ಕಾಲೇಜಿನ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದನು.  ಸೋಮವಾರ ನಡೆದ 
ಜಾಬಿರ್ ನ  ಸಹೋದರಿಯ ವಿವಾಹದಲ್ಲಿ ಪಾಲ್ಗೊಳ್ಳಲು  ಜೈನುಲ್ ಆಬಿದ್ ಮತ್ತು ಸ್ನೇಹಿತರು  ಬಂದಿದ್ದರು.   ಮಧ್ಯಾಹ್ನ  ಸ್ನೇಹಿತರ   ಜೊತೆ ಹೊಳೆಗೆ  ಸ್ನಾನಕ್ಕಿಳಿದಿದ್ದು, ಈ ಸಂದರ್ಭದಲ್ಲಿ  ಘಟನೆ ನಡೆದಿದೆ.  ಜೊತೆಗಿದ್ದವರು ರಕ್ಷಿಸಲೆತ್ನಿಸಿದರೂ  ಸಾಧ್ಯವಾಗಲಿಲ್ಲ . ಬೊಬ್ಬೆ ಕೇಳಿ ದಾವಿಸಿ ಬಂದ ಸ್ಥಳೀಯರು ಮೇಲಕ್ಕೆತ್ತಿ  ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ .
ಮ್ರತದೇಹವನ್ನು ಕಾಸರಗೋಡು ಜನರಲ್  ಆಸ್ಪತ್ರೆಯಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ  ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News