ಪುತ್ತೂರು: ಮೀಸಲು ಅರಣ್ಯದೊಳಗೆ ಅಕ್ರಮ ರಸ್ತೆ ನಿರ್ಮಾಣಕ್ಕೆ ಯತ್ನ: ಮೂವರ ಸೆರೆ
Update: 2016-04-12 17:48 IST
ಪುತ್ತೂರು: ಮೀಸಲು ಅರಣ್ಯದ ಗುಪ್ಪೆಯೊಳಗೆ ನುಗ್ಗಿ ರಕ್ಷಿತಾರಣ್ಯದ ತಡೆಬೇಲಿ ಕಿತ್ತೊಗೆದು ಮಂಗಳವಾರ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿಗಳು ನಾಲ್ವರ ವಿರುದ್ದ ಕೇಸು ದಾಖಲಿಸಿ, ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಖಾಸಗಿ ವ್ಯಕ್ತಿಯೊಬ್ಬರ ದೂರಿನ ಹಿನ್ನಲೆಯಲ್ಲಿ ಮೀಸಲು ಅರಣ್ಯಕ್ಕೆ ಸೇರಿದ ಶಿಬಾಜೆ ಗ್ರಾಮದ ಬರೆಮೇಲು ಪಾದೆಗುಡ್ಡೆ ಎಂಬಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ನಡೆಸುತ್ತಿದ್ದ ಸ್ಥಳೀಯರಾದ ಗುರುವ ಮುಗೇರ, ಪೊಡಿಯ, ಶ್ರೀಧರ ಮತ್ತು ಕೆ.ವಿ. ಚಾಕೋ ಎಂಬವರ ವಿರುದ್ದ ಅರಣ್ಯ ಇಲಾಖೆಯ ಅಧಿಕಾರಿಗಲು ಕೇಸು ದಾಖಲಿಸಿದ್ದಾರೆ. ಈ ಪೈಕಿ ಗುರುವ ಮುಗೇರ, ಪೊಡಿಯ, ಶ್ರೀಧರ ಎಂಬವರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.