ಬೌದ್ಧ ಧರ್ಮಕ್ಕೆ ಮತಾಂತರಗೊಂಡ ವೇಮುಲರ ತಾಯಿ
ಹೈದರಾಬಾದ್,ಎ.12: ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿವಿಯ ವಿದ್ಯಾರ್ಥಿ ರೋಹಿತ ವೇಮುಲರ ತಾಯಿ ರಾಧಿಕಾ ವೇಮುಲ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 28ರ ಹರೆಯದ ರೋಹಿತ್ ಎರಡನೇ ವರ್ಷದ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದು,ತನ್ನ ಹಾಸ್ಟೆಲ್‌ನ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಎಬಿವಿಪಿ ಕಾರ್ಯಕರ್ತರ ಗುಂಪಿನೊಂದಿಗೆ ಸಂಘರ್ಷದ ಬಳಿಕ ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿವಿಯು ರೋಹಿತರನ್ನು ಹಾಸ್ಟೆಲ್‌ನಿಂದ ಉಚ್ಚಾಟಿಸಿತ್ತು. ಹೀಗಾಗಿ ಕ್ಯಾಂಪಸ್‌ನಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡು ವಾಸಿಸುವ ಅನಿವಾರ್ಯತೆಗೆ ಸಿಲುಕಿದ್ದರು.
2015,ಆಗಸ್ಟ್‌ನಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ್ದರ ವಿರುದ್ಧ ವಿವಿಯ ಅಂಬೇಡ್ಕರ್ ವಿದ್ಯಾರ್ಥಿ ಸಂಘವು ಪ್ರತಿಭಟನೆಯನ್ನು ನಡೆಸಿತ್ತು ಎನ್ನುವುದು ಮೂಲಗಳ ಹೇಳಿಕೆ. ಇದನ್ನು ಎಬಿವಿಪಿ ವಿರೋಧಿಸಿದಾಗ ವಿವಿ ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ರೋಹಿತ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸಕ್ರಿಯ ಸದದ್ಯರಾಗಿದ್ದರು.