×
Ad

ಜೀವನ ಎಂಬುದು ಮಣ್ಣಿನ ಮಡಿಕೆ: ವಿವೇಕ್ ಪಾಯಸ್

Update: 2016-04-12 20:03 IST

ಬೆಳ್ತಂಗಡಿ: ಮಾದಕ ವಸ್ತುಗಳು ವಿದ್ಯಾರ್ಥಿಗಳ ಬದುಕನ್ನು ಹಾಳುಮಾಡುತ್ತಿದೆ. ಹುಟ್ಟುವಾಗ ಯಾರೂ ಕೆಡುಕರಲ್ಲ ಮತ್ತು ಯಾರೂ ಕುಡುಕರಲ್ಲ. ಆದರೆ ಎಲ್ಲರೂ ಪರಿಸ್ಥಿತಿಯ ದಾಸರಾಗಿ ಅದರ ಗುಲಾಮರಾಗುತ್ತಿದ್ದಾರೆ ಇದರಿಂದ ವಿಧ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯ ನಡೆಯಬೇಕಾಗಿದೆ. ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯದರ್ಶಿ ವಿವೇಕ್ ಪಾಯಸ್ ಅಭಿಪ್ರಾಯಪಟ್ಟರು.

ಅವರು ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸದಲ್ಲಿ ವಿದ್ಯಾರ್ಥಿಗಳು ಹಾಗೂ ದುಶ್ಚಟಗಳು ಎಂಬ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಜೀವನ ಎಂಬುದು ಮಣ್ಣಿನ ಮಡಿಕೆ ಇದ್ದ ಹಾಗೆ, ವಿದ್ಯಾರ್ಥಿಗಳು ಇದನ್ನು ಅರಿಯುವ ಬದಲಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ರೋಗಿಗಳಾಗುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಪಡೆದುಕೊಂಡರೂ ಕ್ಯಾಂಪಸ್‌ನಿಂದ ಹೊರಗೆ ಮಾದಕ ಜಾಲಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳ ಆಲೋಚನೆ ಹಾಗೂ ಭಾವನೆಗಳನ್ನು ಮಾದಕ ವಸ್ತುಗಳು ಹಾಳು ಮಾಡುತ್ತಿವೆ ಎಂದು ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಪ್ಪ ನಾಯಕ, ಎಸ್.ಡಿ.ಎಂ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಭಾನುಪ್ರಕಾಶ್ ಮತ್ತು ಶಕುಂತಲಾ ಜೈನ್ ಹಾಗೂ ವಿವಿಧ ಕಾಲೇಜುಗಳ ಸ್ವಯಂಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಪ್ರಶಾಂತ್ ದಿಡುಪೆ ಸ್ವಾಗತಿಸಿ, ವಂದಿಸಿದರು, ಕುಮಾರಿ ಅಕ್ಷತಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News