×
Ad

ಇಬ್ಬರು ಆರೋಪಿಗಳ ಬಂಧನ

Update: 2016-04-12 23:27 IST


ಹೊಸದಿಲ್ಲಿ, ಎ.12: ರಾಷ್ಟ್ರೀಯ ತನಿಖೆ ಸಂಸ್ಥೆಯ (ಎನ್‌ಐಎ) ಅಧಿಕಾರಿ ತಂಝೀಲ್ ಅಹ್ಮದ್‌ರ ಹತ್ಯೆಗೆ ವೈಯಕ್ತಿಕ ದ್ವೇಷ ಕಾರಣವಾಗಿರುವ ಸಾಧ್ಯತೆಯಿದೆ. ಪ್ರಕರಣವೊಂದರಲ್ಲಿ ಅವರು ಸಹಾಯ ಮಾಡಲಿಲ್ಲವೆಂಬ ಅಸಮಾಧಾನ ಹಂತಕರ ಲ್ಲೋರ್ವನಿಗಿತ್ತೆಂದು ಬರೇಲಿ ಪೊಲೀಸರು ಇಂದು ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಪ್ರಧಾನ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತರಲ್ಲೊಬ್ಬನಾದ ರೆಯಾನ್ ಎಂಬಾತ ಬೈಕ್ ಚಲಾಯಿಸುತ್ತಿದ್ದನು. ತಂಝೀಲ್‌ರಿಗೆ ಗುಂಡು ಹಾರಿಸಿದ್ದ ಅವನ ಸಹಚರ ಮುನೀರ್ ಎಂಬಾತನನ್ನು ಇನ್ನಷ್ಟೇ ಬಂಧಿಸಬೇಕಿದೆ. ಆತನ ಕುರಿತು ಮಾಹಿತಿ ನೀಡಿದವರಿಗೆ ರೂ. 50 ಸಾವಿರ ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.
ರೆಯಾನ್, ಪ್ರಕರಣವೊಂದರ ಸಂಬಂಧ ತಂಝೀಲ್‌ರಿಂದ ಸಹಾಯ ಕೇಳಿದ್ದನು. ಆದರೆ, ಅವರು ಅದಕ್ಕೆ ನಿರಾಕರಿಸಿದಾಗ ಆತ ಹತಾಶನಾದನೆಂಬುದು ವಿಚಾರಣೆಯ ವೇಳೆ ರೆಯಾನ್ ತಿಳಿಸಿದ್ದಾನೆಂದು ಬರೇಲಿಯ ಆರಕ್ಷಕ ಮಹಾನಿರೀಕ್ಷಕ ವಿಜಯ್ ಮೀನಾ ತಿಳಿಸಿದ್ದಾರೆ.
ಆದರೆ, ಪತ್ರಕರ್ತರ ಮುಂದೆ ಹಾಜರು ಮಾಡಲಾಗಿದ್ದ ರೆಯಾನ್, ಇನ್ನೊಂದು ಸಂಭಾವ್ಯ ಕಾರಣದ ಕುರಿತು ಸೂಚನೆ ನೀಡಿದ್ದು, ನಿಜವಾದ ಕಾರಣ ಮುನೀರ್‌ಗೆ ತಿಳಿದಿದೆ. ಆದರೆ, ತಮ್ಮ ಕುರಿತಾಗಿ ತಂಝೀಲ್‌ರ ವರ್ತನೆ ಚೆನ್ನಾಗಿರಲಿಲ್ಲವೆಂದು ಹೇಳಿದ್ದಾನೆ.
ತನಗೆ ತಂಝೀಲ್‌ರ ಮೇಲೆ ಯಾವುದೇ ದ್ವೇಷ ಇರಲಿಲ್ಲ. ಆದರೆ, ಸ್ನೇಹದ ಕಾರಣ ದಿಂದ ಮುನೀರ್ ಚಿತಾವಣೆ ನಡೆಸಿದನೆಂದು ಇನ್ನೊಬ್ಬ ಆರೋಪಿ ಜುನೈದ್ ಎಂಬಾತ ತಿಳಿಸಿದ್ದಾನೆ.
ರೆಯಾನ್ ಹಾಗೂ ಆತನ ತಂದೆ ನೀಡಿ ರುವ ಕೆಲವು ಹೇಳಿಕೆಗಳನ್ನು ಸಾಂದರ್ಭಿಕ ಸಾಕ್ಷಗಳಿಂದ ಪರಿಶೀಲಿಸಲಾಗಿದೆ. ಕೆಲವನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿದೆಯೆಂದು ಮೀನಾ ಹೇಳಿದ್ದಾರೆ.
ಶಂಕಿತ ಐಸಿಸ್ ಸಹಾನುಭೂತಿಕಾರರು ಸಹಿತ ಹಲವು ಭಯೋತ್ಪಾದಕ ಪ್ರಕರಣ ಗಳ ತನಿಖೆಯನ್ನು 45ರ ಹರೆಯದ ತಂಝೀಲ್ ನಡೆಸುತ್ತಿದ್ದರು. ಆವರು ಮಾಡುತ್ತಿದ್ದ ಕೆಲಸಕ್ಕೂ ಅವರ ಹತ್ಯೆಗೂ ಸಂಬಂಧವಿದೆಯೇ ಎಂಬ ಕುರಿತು ಭದ್ರತಾ ಸಂಸ್ಥೆಗಳ ಜಂಟಿ ತಂಡವೊಂದು ತನಿಖೆ ನಡೆಸುತ್ತಿದೆ.
ತನಿಖೆಯ ವೇಳೆ ವೃತ್ತಿಪರ ಹಾಗೂ ವೈಯಕ್ತಿಕ ದ್ವೇಷ ಸಹಿತ ಎಲ್ಲ ಕೋನ ಗಳಿಂದಲೂ ಪರಿಶೀಲಿಸಲಾಗುವುದೆಂದು ಬರೇಲಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News