ಕಾಪು ಪುರಸಭೆ: ಅಭ್ಯರ್ಥಿಗಳ ಪಟ್ಟಿ ಪ್ರಕಟ
ಕಾಪು, ಎ.12: ಪುರಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ 23 ಅಭ್ಯರ್ಥಿಗಳ ಪಟ್ಟಿಯನ್ನು ಸಚಿವ ವಿನಯಕುಮಾರ್ ಸೊರಕೆ ಬಿಡುಗಡೆ ಮಾಡಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು ದಂಡತೀರ್ಥ ವಾರ್ಡ್‌ನಿಂದ, ಮಲ್ಲಾರು ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಕೊಂಬಗುಡ್ಡೆ ವಾರ್ಡ್‌ನಿಂದ ಕಣಕ್ಕಿಳಿದ ಪ್ರಮುಖರು.
ಕೈಪುಂಜಾಲು-ಜುಲೇಟ್ ರೇಶ್ಮಾ, ಕೋತಲಕಟ್ಟೆ-ಸೌಮ್ಯಾ, ಕರಾವಳಿ-ಪ್ರಭಾಕರ ಪೂಜಾರಿ, ಪೊಲಿಪುಗುಡ್ಡೆ-ಸರೋಜಿನಿ, ಕಲ್ಯಾ ಸುರೇಶ್ ದೇವಾಡಿಗ, ಭಾರತ್ ನಗರ-ಫರ್ಝಾನಾ, ಬೀಡುಬದಿ-ಅಶ್ವಿನಿ, ಪೊಲಿಪು-ಪ್ಯಾರೇಲಾಲ್ (ಲವ) ಕರ್ಕೇರ, ಕಾಪುಪೇಟೆ-ಮಾಧವ ಆರ್. ಪಾಲನ್, ಲೈಟ್ ಹೌಸ್-ಚಂದ್ರಾವತಿ ವಿ. ಶ್ರೀಯಾನ್, ಕೊಪ್ಪಲಂಗಡಿ-ಕೆ.ಎಚ್. ಉಸ್ಮಾನ್, ತೊಟ್ಟಂ-ಅಮಿತಾ, ದುಗನ್‌ತೋಟ-ಸುಲೋಚನಾ ಬಂಗೇರ, ಮಂಗಳಪೇಟೆ-ಹಮೀದ್, ಜನಾರ್ದನ ದೇವಸ್ಥಾನ-ವಿಜಯಲಕ್ಷ್ಮೀ, ಬಡಗರಗುತ್ತು -ಮುಹಮ್ಮದ್ ಇಮ್ರಾನ್, ಜನರಲ್ ಶಾಲೆ-ಮಾಲಿನಿ, ಗುಜ್ಜಿ-ರೇಶ್ಮಾ, ಗರಡಿ-ಶಾಂತಲತಾ, ಕುಡ್ತಿಮಾರ್-ಶಾಬು ಸಾಹೇಬ್, ಅಹ್ಮದ್ ಮೊಹಲ್ಲಾ-ಲೀಲಾ ಸ್ಪರ್ಧಿಸಲಿದ್ದಾರೆ. 20 ವಾರ್ಡ್‌ನ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದರೆ, ಮೂವರು ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು.
*ಬಿಜೆಪಿ ಬಾಕಿ ಪಟ್ಟಿ ಬಿಡುಗಡೆ: ಬಿಜೆಪಿ ಪಕ್ಷವು ಈಗಾಗಲೇ ಮೂರು ವಾರ್ಡ್ ಹೊರತು ಪಡಿಸಿ ಉಳಿದ ಎಲ್ಲ ವಾರ್ಡಿನ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ ಉಳಿದಿದ್ದ ತೊಟ್ಟಂ, ದುಗ್ಗನ್‌ತೋಟ, ಮಂಗಳಪೇಟೆ ವಾರ್ಡ್‌ಗಳಿಗೆ ತಾಪಂ ಮಾಜಿ ಸದಸ್ಯೆ ಶಾಂಭವಿ ಕುಲಾಲ್, ಸೌಮ್ಯಾ, ಮುಹಮ್ಮದ್ ಫಕೀರ್ ಸ್ಪರ್ಧಿಸಲಿದ್ದಾರೆ. ಪಕ್ಷದ 18 ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದು,್ದ ಉಳಿದ ಐವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
*ಜೆಡಿಎಸ್, ಎಸ್‌ಡಿಪಿಐ ಸ್ಪರ್ಧೆ: ಪುರಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳು 6 ವಾರ್ಡ್‌ನಲ್ಲಿ ಸ್ಪರ್ಧಿಸಲಿದ್ದು, 2 ಕಡೆ ಎಸ್‌ಡಿಪಿಐ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕೊಪ್ಪಲಂಗಡಿ-ಜಯರಾಮ ಆಚಾರ್ಯ, ಮಂಗಳಪೇಟೆ-ಎಂ.ಎಚ್.ಬಿ. ಮುಹಮ್ಮದ್, ಬಡಗರಗುತ್ತು-ಆನಂದ ಕೋಟ್ಯಾನ್, ಕೊಂಬಗುಡ್ಡೆ-ಸುಧಾಕರ ಶೆಟ್ಟಿ, ಜನರಲ್ ಶಾಲೆ-ವಿಮಲಾ, ಗರಡಿ ವಾರ್ಡ್-ಸಾಜಿದಾ ಬಾನು ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ. ಎಸ್‌ಡಿಪಿಐ ಪಕ್ಷದಿಂದ ಅಪ್ಸರಾ ಬಾನು ಗುಜ್ಜಿ ವಾರ್ಡ್ ಹಾಗೂ ಜುಲ್ಫೀಕರ್ ಕುಡ್ತಿಮಾರ್ ವಾರ್ಡ್‌ಗೆ ನಾಮಪತ್ರ ಸಲ್ಲಿಸಿದ್ದಾರೆ.