ಮೂಡುಬಿದಿರೆ: ತನಗಾಗಿ ಅಲ್ಪ, ಸಮಾಜಕ್ಕಾಗಿ ಸರ್ವಸ್ವ - ಭಾಸ್ಕರ ರಾವ್
ಮೂಡುಬಿದಿರೆ: ತನಗಾಗಿ ಅಲ್ಪ, ಸಮಾಜಕ್ಕಾಗಿ ಸರ್ವಸ್ವ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ನಿಸ್ವಾರ್ಥ ಮನೋಭಾವನೆಯಿಂದ ಸೇವೆಯನ್ನು ಮಾಡಿದಲ್ಲಿ ಉಂಟಾಗುವ ಆತ್ಮ ಸಂತೃಪ್ತಿ ಬೇರೆ ಯಾವ ಕಾರ್ಯದಿಂದಲೂ ಸಿಗುವುದು ಅಸಾಧ್ಯ. ಈ ನಿಟ್ಟಿನಲ್ಲಿ ಸಿಂಚನ ಸೇವಾ ಟ್ರಸ್ಟ್ ಕಳೆದ ಎರಡು ವರ್ಷದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ವಿದ್ಯಾರ್ಥಿವೇತನ ನೀಡುತ್ತಿರುವುದು ಬಹಳ ಉತ್ತಮ ಕಾರ್ಯ ಎಂದು ನಿವೃತ್ತ ಪ್ರಾಂಶುಪಾಲ ಭಾಸ್ಕರ ರಾವ್ ಹೇಳಿದರು.
ನಡ್ಯೋಡಿ ಹಿ.ಪ್ರಾ.ಶಾಲೆಯಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳಿಗೆ ಉಚಿತ ಬರಹ ಪುಸ್ತಕ, ಲೇಖನ ಸಾಮಾಗ್ರಿ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಿಂಚನ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಧ್ಯಕ್ಷ ಮೋಹನ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ವಿದ್ಯಾಶ್ರೀಯವರಿಗೆ ಸಿಂಚನ ಸಮಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ ಹಸ್ತಾಂತರಿಸಲಾಯಿತು.
ಸಿಂಚನ ಚಿಟ್ಸ್‌ನ ಶಾಖಾಧಿಕಾರಿ ರತ್ನಾಕರ ಹೆಗ್ಡೆ, ಶ್ರೀ ಸಿಂಚನ ಸೌಹಾರ್ಧ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ, ನಿರ್ದೇಶಕ ಎಂ.ಕೆ.ದಿನೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಜಯಶ್ರೀ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟಿ ಸಂಗೀತಾ ಪ್ರಭು ಸ್ವಾಗತಿಸಿದರು. ಮೇಲ್ವೀಚಾರಕ ಕುಮುದಾಕ್ಷ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಕಸ್ತೂರಿ ಧನ್ಯವಾದವಿತ್ತರು.