ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ:ಪ.ಬಂಗಾಲ, ಅಸ್ಸಾಮ್‌ಗಳಲ್ಲೂ ನಡುಗಿದ ಭೂಮಿ
Update: 2016-04-13 19:51 IST
ಹೊಸದಿಲ್ಲಿ,ಎ.13: ಮ್ಯಾನ್ಮಾರ್‌ನಲ್ಲಿ ಬುಧವಾರ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭಾರತದ ಪ.ಬಂಗಾಲ, ಬಿಹಾರ,ಅಸ್ಸಾಂ ಮತ್ತು ಜಾರ್ಖಂಡ್‌ಗಳಲ್ಲಿಯೂ ಕಂಪನದ ತೀವ್ರ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಜೀವ ಅಥವಾ ಆಸ್ತಿ ಹಾನಿ ಸಂಭವಿಸಿರುವುದು ತಕ್ಷಣಕ್ಕೆ ವರದಿಯಾಗಿಲ್ಲ.
ಗುವಾಹಟಿ ಮತ್ತು ಕೋಲ್ಕತಾಗಳಲ್ಲಿ ಭೂಮಿಯು ತೀವ್ರವಾಗಿ ನಡುಗಿದ್ದು,ಜನರನ್ನು ಕಟ್ಟಡಗಳಿಂದ ತೆರವುಗೊಳಿಸಲಾಗಿತ್ತು. ದಿಲ್ಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿಯೂ ಭೂಮಿಯು ನಡುಗಿದ್ದು ಅನುಭವಕ್ಕೆ ಬಂದಿತ್ತು. ನೇಪಾಲ,ಬಾಂಗ್ಲಾದೇಶ ಮತ್ತು ಭೂತಾನಗಳಲ್ಲಿಯೂ ಕಂಪನ ಉಂಟಾಗಿತ್ತು. ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ಮಾಂಡಲೇದ ವಾಯುವ್ಯದಲ್ಲಿ ಸ್ಥಿತಗೊಂಡಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಸಂಜೆ 7:25ಕ್ಕೆ 134 ಕಿ.ಮೀ.ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಹೇಳಿದೆ.