ಮುಖ ಮುಚ್ಚಿದವರಿಗೆ ಈ ನಿಲ್ದಾಣದೊಳಗೆ ಪ್ರವೇಶವಿಲ್ಲ!

Update: 2016-04-13 16:24 GMT

ಹೊಸದಿಲ್ಲಿ, ಎ.13: ಮೆಟ್ರೊ ಪ್ರಯಾಣಿಕರಿಗೆ, ಶಸ್ತ್ರ ಚಿಕಿತ್ಸಾ ಮುಖವಾಡ, ಮಫ್ಲರ್, ವಾಯು ಮಾಲಿನ್ಯ, ಮುಖವಾಡ ಅಥವಾ ದುಪಟ್ಟಾದಿಂದ ಮುಖ ಮುಚ್ಚಿಕೊಂಡು ನಿಲ್ದಾಣದೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ. ರಾಜೇಂದ್ರ ಪ್ಲೇಸ್ ಮೆಟ್ರೊ ನಿಲ್ದಾಣದಲ್ಲಿ ರೂ.12 ಲಕ್ಷ ದರೋಡೆ ನಡೆದ ಒಂದು ದಿನದ ಬಳಿಕ, ಮಂಗಳವಾರ ಸಿಐಎಸ್‌ಎಫ್ ಈ ನಿರ್ಧಾರ ಕೈಗೊಂಡಿದೆ.
ದಿಲ್ಲಿ ಮೆಟ್ರೊದಲ್ಲಿ ಭದ್ರತಾ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ಪರಿಶೀಲನೆಯೊಂದನ್ನು ನಡೆಸಲಾಗುತ್ತಿದೆ. ಪ್ರಯಾಣಿಕನೊಬ್ಬ ಗ್ರಾಹಕರ ನಿಗಾ ಕೇಂದ್ರ ಅಥವಾ ಟಿಕೆಟ್ ಕೌಂಟರ್‌ಗೆ ತಲುಪುವ ಮೊದಲು, ಅವನು ಸಂಪೂರ್ಣ ತಪಾಸಣೆಗೊಗಾಗುವುದನ್ನು ಇದು ಖಚಿತಪಡಿಸಲಿದೆ. ತಪಾಸಣೆಯ ವೇಳೆ ಪ್ರತಿಯೊಬ್ಬರಿಗೂ ಮುಖವನ್ನು ತೋರಿಸುವಂತೆ ತಿಳಿಸಲಾಗವುದು. ಹೀಗೆ, ಪ್ರತಿಯೊಬ್ಬರ ಮುಖಗಳನ್ನೂ ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗುವುದು. ಕೇವಲ ಗಂಭೀರ ಅನಾರೋಗ್ಯದಲ್ಲಿರುವವರಿಗಷ್ಟೇ ಮುಖ ಮುಚ್ಚಿಕೊಳ್ಳಲು ಅವಕಾಶ ನೀಡಲಾಗುವುದೆಂದು ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆದರಿಕೆಯ ಮೇಲ್ ಒಂದು ಬಂದ ಮೇಲೆ 12ರಷ್ಟು ಮೆಟ್ರೊ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಇನ್ನಷ್ಟು ನಿಲ್ದಾಣಗಳಲ್ಲಿ ಭದ್ರತೆ ಬಲಪಡಿಸಲು ಸಿಐಎಸ್‌ಎಫ್ ಯೋಚಿಸುತ್ತಿದೆ. ಪರಿಶೀಲಮನೆ ಮುಗಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News