ಶೀಘ್ರವೇ ಆಲ್ಫಾ ಸೆಂಟಾರಿಗೆ ಶೋಧಕ
Update: 2016-04-13 23:32 IST
ನ್ಯೂಯಾರ್ಕ್, ಎ. 13: ರಶ್ಯದ ಬಿಲಿಯಾಧೀಶ ಉದ್ಯಮಿ ಯೂರಿ ಮಿಲ್ನರ್ ಮತ್ತು ಬ್ರಿಟಿಶ್ ಖಗೋಳಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಮಂಗಳವಾರ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯೊಂದನ್ನು ಪ್ರಕಟಿಸಿದರು.
ಯೋಜನೆಯ ಪ್ರಕಾರ, ನಮ್ಮ ಸೌರಮಂಡಲದ ಸಮೀಪದ ಸೌರ ಮಂಡಲ ಆಲ್ಫಾ ಸೆಂಟಾರಿಗೆ ಸೆಲ್ ಫೋನ್ ಗಾತ್ರದ ಕಿರುವ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸುವುದು. ಆಲ್ಫಾ ಸೆಂಟಾರಿ ಭೂಮಿಯಿಂದ 4.37 ಜ್ಯೋತಿರ್ವರ್ಷಗಳಷ್ಟು (25 ಲಕ್ಷ ಕೋಟಿ ಮೈಲು) ದೂರ ಇದೆ. ಈಗಿನ ಅತ್ಯಂತ ವೇಗದ ಬಾಹ್ಯಾಕಾಶ ನೌಕೆ ಅಲ್ಲಿಗೆ ತಲುಪಲು 30,000 ವರ್ಷಗಳೇ ಬೇಕು. ಆದರೆ, ಯೋಜನೆ ಕಾರ್ಯರೂಪಕ್ಕೆ ಬರುವ ಹೊತ್ತಿನಲ್ಲಿ ಭೂಮಿಯಿಂದ ಅಲ್ಲಿಗೆ ತಲುಪಲು ಬಾಹ್ಯಾಕಾಶ ನೌಕೆಗೆ ಸುಮಾರು 20 ವರ್ಷಗಳು ಬೇಕಾಗಬಹುದು ಎಂಬುದಾಗಿ ವಿಜ್ಞಾನಿಗಳು ಅಂದಾಜಿಸಿದ್ದಾರೆ.