ರೈತನ ಬೆಳೆಗೆ ಸೂಕ್ತ ಬೆಲೆ, ಮಾರುಕಟ್ಟೆ ಒದಗಿಸಿ: ಕೊಡಿ್ಗ
ಮಣಿಪಾಲ, ಎ.13: ನಾಡಿನ ರೈತ ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆಯಾಗಲೀ, ಸಬ್ಸಿಡಿಯಾಗಲಿ ನೀಡಬೇಕಿಲ್ಲ. ಆದರೆ ಆತ ಬೆಳೆದ ಬೆಳೆಗಳಿಗೆ ಸೂಕ್ತವಾದ ಧಾರಣೆ ಹಾಗೂ ಸರಿಯಾದ ಮಾರುಕಟ್ಟೆಯನ್ನು ಕಲ್ಪಿಸಿದರೆ ಸಾಕು. ನಾಡಿನ ರೈತನ ಆತ್ಮಹತ್ಯೆ ಯನ್ನು ತಡೆಗಟ್ಟಬಹುದು ಎಂದು ರಾಜ್ಯ 3ನೆ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ಕೃಷಿಕ ಎ.ಜಿ.ಕೊಡ್ಗಿ ಹೇಳಿದ್ದಾರೆ.
ಮಣಿಪಾಲ ವಿವಿ ವಾಣಿಜ್ಯ ವಿಭಾಗದ ಸಾಮಾಜಿಕ ಉದ್ಯಮಶೀಲತಾ ಕೇಂದ್ರ ವತಿಯಿಂದ ನಬಾರ್ಡ್ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಸಹಯೋಗದಲ್ಲಿ ಮಣಿಪಾಲದ ಎಂಐಟಿಯ 21ನೇ ಬ್ಲಾಕ್ ಬಳಿ ಅಗ್ರಿ ರೆನ್ (ನಿಮ್ಮ ತೋಟ) ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮಲ್ಲಿ ಖಾಸಗಿಯವರು ತೋಡುವ ಬೋರ್‌ವೆಲ್‌ನಲ್ಲಿ ಸರಿಯಾಗಿ ನೀರು ಸಿಗುತ್ತದೆ. ಆದರೆ ಸರಕಾರ ತೋಡುವ ಬೋರ್‌ವೆಲ್‌ನಲ್ಲಿ ನೀರೇ ಬರುವುದಿಲ್ಲ. ಇವೆಲ್ಲವೂ ಹಣ ಮಾಡುವ ಸ್ಕೀಮ್‌ಗಳು. ಇವುಗಳ ಬಗ್ಗೆ ಅಧಿಕಾರಿಗಳು ಎಚ್ಚರವ ಹಿಸಬೇಕು. ಇಂಥ ‘ಬೋರ್‌ವೆಲ್ ಹಗರಣ’ ಕುರಿತ ವರದಿಯನ್ನು ನಾನು ಸರಕಾರಕ್ಕೆ ನೀಡಿ ದ್ದೇನೆ ಎಂದರು.
ಅಗ್ರಿರೆನ್ ನೂತನ ಮೊಬೈಲ್ ಆ್ಯಪ್‌ನ್ನು ಮಣಿಪಾಲ ವಿವಿಯ ಕುಲಪತಿ ಡಾ.ಎಚ್.ವಿನೋದ್ ಭಟ್ ಬಿಡುಗಡೆ ಗೊಳಿಸಿ ಮಾತನಾಡಿದರು.
ಎಂಐಟಿ ನಿರ್ದೇಶಕ ಡಾ.ಜಿ.ಕೆ.ಪ್ರಭು, ಮಣಿಪಾಲ ವಿವಿ ಕುಲಸಚಿವ ಡಾ. ನಾರಾ ಯಣ ಸಭಾಹಿತ್, ನಬಾರ್ಡ್ ಎಜಿಎಂ ಪ್ರಸಾದ್ ರಾವ್, ಜಿಲ್ಲಾ ಮಾರ್ಗ ದರ್ಶಿ ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಪ್ರಬಂಧಕ ಸುಬ್ಬಾರಾವ್, ಮಣಿಪಾಲ ವಿವಿ ವಾಣಿಜ್ಯ ವಿಭಾಗದ ಸಾಮಾಜಿಕ ಉದ್ಯಮ ಶೀಲತಾ ಕೇಂದ್ರದ ಸಂಯೋಜಕ ಡಾ.ಎಚ್. ಜಿ. ಜೋಷಿ, ಮುಖ್ಯಸ್ಥ ಸಂದೀಪ್ ಶೆಣೈ, ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ಅಧ್ಯಕ್ಷ ಎ.ಅಶೋಕ್ ಕುಮಾರ್ ಕೊಡ್ಗಿ, ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.