×
Ad

ದಲಿತರ ಮೇಲಿನ ದೌರ್ಜನ್ಯ ತಡೆಗೆ ಮನವಿ

Update: 2016-04-14 16:25 IST

ಮೂಡುಬಿದಿರೆ, ಎ. 14: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಅಸ್ಪಶ್ಯತೆ, ದೇವಸ್ಥಾನಗಳಲ್ಲಿ ಮಡೆ ಮಡೆಸ್ತಾನ, ಪಂಕ್ತಿಭೇದ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ನಿಷೇಧಿಸುವ ಕುರಿತು ಮೂಡುಬಿದಿರೆಯ ದಲಿತ ಹಕ್ಕುಗಳ ಸಮಿತಿ ಬುಧವಾರ ಇಲ್ಲಿನ ಉಪತಹಶಿಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು. ಸಾಮಾಜಿಕ ಅಸಮಾನತೆಯಿಂದಾಗಿ ದಲಿತರು ನಿತ್ಯ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಈ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ವರ್ಷಾಚರಣೆಯಲ್ಲಿರುವ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಮತ್ತು ದಲಿತ ಶೋಷಣಾ ಮುಕ್ತಿ ಮಂಚ್ ರಾಜ್ಯಾದ್ಯಂತ ಸಮಾನತಾ ಸಂಕಲ್ಪ ದಿನಾಚರಣೆಗೆ ಕರೆ ನೀಡಿದೆ. ಈ ಬಗ್ಗೆ ಸರಕಾರದ ಗಮನಸೆಳೆಯಲು ಹೋರಾಟ ನಡೆಸಲಾಗುವುದು ಎಂದು ದಲಿತ ಹಕ್ಕುಗಳ ಮೂಡುಬಿದಿರೆ ಸಮಿತಿ ಅಧ್ಯಕ್ಷ ಶಂಕರ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸಲ್ಲಿಕೆ ವೇಳೆ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News