ಮುಲ್ಕಿ: ಹಿಂದೂ ಧರ್ಮದಲ್ಲಿರುವಷ್ಟು ಜಾತೀವಾದ ಮತ್ತು ಅಸ್ಪ್ರಶ್ಯತೆ ಜಗತ್ತಿನ ಯಾವ ಧರ್ಮದಲ್ಲೂ ಕಾಣಲು ಅಸಾಧ್ಯ - ಲೋಕೇಶ್
ಮುಲ್ಕಿ, ಎ.14: ಪ್ರಜಾಪ್ರಭುತ್ವ ಭಾರತದಲ್ಲಿ ಜಾತೀವಾದ ಅಸ್ಪ್ರಶಗಯ್ಯತೆ ತಾಂಡವವಾಡುತ್ತಿದ್ದು, ಇದಕ್ಕೆ ಮೀಸಲಾತಿ ಸ್ಪಷ್ಠ ಉದಾಹರಣೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಮಂಗಳೂರು ವಲಯ ಸಂಚಾಲಕ ಲೋಕೇಶ್ ಹೇಳಿದರು.
ಅವರು ಕೆರೆಕಾಡು ದಲಿತ ಸಂಘರ್ಷ ಸಮಿತಿ ಕೆರೆಕಾಡು ಸ.ಹಿ.ಪ್ರಾ.ಶಾಲೆಯಲ್ಲಿ ಆಯೋಜಿಸಿದ್ದ ಡಾ. ಬಾಬಾ ಸಾಹೇಬ್ ಅಂಬೆಡ್ಕರ್ ಅವರ 125ನೆ ಜನ್ನ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಾತಿವಾದಿಗಳು ಮತ್ತು ಬ್ರಾಹ್ಮಣಶಾಹಿತ್ವ ಸಂವಿದಾನ ಶಿಲ್ಪಿಯನ್ನು ಕೇವಲ ದಲಿತರೆಂಬ ಕಾರಣಕ್ಕೆ ಅವರನ್ನು ಹೀನಾಯವಾಗಿ ಚಿತ್ರಿಸುವ ಕೆಲಸದಲ್ಲಿ ನಿರತವಾಗಿದೆ. ಹಿಂದೂ ಧರ್ಮದಲ್ಲಿರುವಷ್ಟು ಜಾತೀವಾದ ಮತ್ತು ಅಸ್ಪ್ರಶ್ಯತೆ ಜಗತ್ತಿನ ಯಾವ ಧರ್ಮದಲ್ಲೂ ಕಾಣಲು ಅಸಾಧ್ಯ ಎಂದ ಅವರು ದಲಿತರನ್ನು ಹಿಂದುಗಳೆಂದು ಮರಳುಮಾಡಿ ಜಾತಿವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಅಘಾತಕಾರಿ ಬೆಳವಣಿಗೆ. ಈ ಬಗ್ಗೆ ದಲಿತ ಸಂಘಟನೆಗಳು ಎಚ್ಚರಿಕೆಯಿಂದ ಇರಬೇಕೆಂದರು.
ಈ ಸಂದರ್ಭ ರಾಜ್ಯ ಡಿಎಸ್ ಎಸ್ ಸದಸ್ಯ ಶ್ರೀಪತಿಕೆರೆಕಾಡು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭಾರತಿ, ಶಿಕ್ಷಣ ತಜ್ಣ ರವೀಂದ್ರ, ಮುಖ್ಯೋಪಾಧ್ಯಾಯಿನಿ ಭುವನೇಶ್ವರಿ ಪೋಷಕ ಪ್ರತಿನಿಧಿಗಳಾದ ಸುರೇಶ್ ಬೆಳ್ಳಾಯರು, ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.