×
Ad

ಈ ಭಿಕ್ಕು ಅಂಬೇಡ್ಕರ್‌ರನ್ನು ಬೌದ್ಧಧರ್ಮಕ್ಕೆ ಕರೆತಂದರು

Update: 2016-04-14 17:54 IST

ಹೊಸದಿಲ್ಲಿ, ಎಪ್ರಿಲ್ 14: ದೇಶದ ಅದ್ಭುತ ಸಂವಿಧಾನ ಕರ್ತೃ ಡಾ. ಭೀಮರಾವ್ ಅಂಬೇಡ್ಕರ್‌ರನ್ನು ಬೌದ್ಧಧರ್ಮಕ್ಕೆ ಕರೆತಂದ ಭಿಕ್ಕುಗಳಲ್ಲಿ ಒಬ್ಬರಾದ 90ವರ್ಷದ ಭಾದಂತಾ ಪ್ರಜ್ಞಾನಂದ ಈಗ ತನ್ನ ಅಧಿಕ ಸಮಯವನ್ನು ಹಾಸಿಗೆಯಲ್ಲಿಯೇ ಕಳೆಯುತ್ತಿದ್ದಾರೆ. ಅವರು ಸಾಂಕೇತಿಕ ಭಾಷೆಯಲ್ಲಿ ಮಾತ್ರವೇ ಮಾತಾಡುತ್ತಿದ್ದಾರೆ. ಕೆಲವೊಮ್ಮೆ ತನ್ನ ಮಾತನ್ನು ಬರೆದು ತಿಳಿಸುತ್ತಾರೆ.

ಟೈಮ್ಸ್‌ಆಫ್ ಇಂಡಿಯಾದ ವರದಿ ಪ್ರಕಾರ ಪ್ರಜ್ಞಾನಂದರು 1954 ಅಕ್ಟೋಬರ್ 14ರಂದು ಭೀಮರಾವ್ ಅಂಬೇಡ್ಕರ್‌ರಿಗೆ ಬೌದ್ಧ ದೀಕ್ಷೆ ನೀಡಿದ ಪ್ರಕ್ರಿಯೆ ನಡೆಸಿದ್ದ ಏಳು ಮಂದಿ ಬಿಕ್ಕುಗಳಲ್ಲಿ ಒಬ್ಬರಾಗಿದ್ದಾರೆ. ಪ್ರಜ್ಞಾನಂದರು ತಾನೇ ಚಂದ್ರಮಣಿ ಮಹಾಥೋರೊರಿಗೆ ನೆರವಾಗಿದ್ದೆ ಎಂದು ತಿಳಿಸಿದ್ದಾರೆ. ಮಹಾಥೋರೋ ಅಂಬೇಡ್ಕರ್‌ರಿಗೆ ಬೌದ್ಧ ದಮ್ಮ ಪ್ರಕ್ರಿಯೆಗೆ ನೇತೃತ್ವವನ್ನು ನೀಡಿದ್ದವರು. ಆ ವೇಳೆ ಅಂಬೇಡ್ಕರ್‌ರ ಪತ್ನಿ ಸವಿತಾ ಕೂಡಾ ಇದ್ದರು. ಅಂಬೇಡ್ಕರ್ ಅಂದು ಜಗತ್ತಿನೊಂದಿಗೆ ತನ್ನೆಲ್ಲ ಸಂಬಂಧವನ್ನು ತೊರೆದಿದ್ದಾರೆ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು ಎಂದು ಪ್ರಜ್ಞಾನಂದ ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಜ್ಞಾನಂದರು ಲಕ್ನೊದ ರಿಸಾಲ್ದಾರ್ ಪಾರ್ಕ್ ಸಮೀಪದ ಬೌದ್ಧವಿಹಾರದಲ್ಲಿ ವಾಸವಿರುವ ಹಿರಿಯ ಭಿಕ್ಕು ಆಗಿದ್ದಾರೆ. ಅವರ ಜೀವನದಲ್ಲಿಎರಡು ಬಾರಿ ಅಂಬೇಡ್ಕರ್ ಸ್ವತಃ ಅವರನ್ನು ಭೇಟಿಯಾಗಲು ಬಂದಿದ್ದರು. ಲಕ್ನೋಗೆ ಬಂದ ಮೇಲೆ ಅವರಿಗೆ ಬೌದ್ಧದಮ್ಮದ ಮೇಲೆ ಅವರ ವಿಶ್ವಾಸ ಇನ್ನಷ್ಟು ವೃದ್ಧಿಯಾಯಿತು ಎಂದು ಪ್ರಜ್ಞಾನಂದ ತಿಳಿಸಿದ್ದಾರೆ. ಲಕ್ನೋಅವರ ಪ್ರೀತಿಯ ಸ್ಥಳವಾಗಿತ್ತು. ಬೌದ್ಧದಮ್ಮ ಸೇರುವುದಕ್ಕಿಂತ ಮೊದಲು ಅವರು 1948ರಲ್ಲಿ ಮತ್ತು 951ರಲ್ಲಿ ಲಕ್ನೋಗೆ ಬಂದಿದ್ದು.1948 ಎಪ್ರಿಲ್ 18ರಲ್ಲಿ ಅವರು ಬುದ್ಧ ವಿಹಾರವನ್ನು ಭೇಟಿ ನೀಡಿದ್ದಾಗ ಬೇರೆಬೇರೆ ಧರ್ಮಗಳ ಜನರ ಜೊತೆಯಲ್ಲಿ ಚರ್ಚೆಯಲ್ಲಿ ನಿರತರಾದ ಫೋಟೊ ಕೂಡಾ ಅಲ್ಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News