ಗುಜರಾತ್ ಮಾಡಲ್‌ನಿಂದಾಗಿ ಭಾರತದಲ್ಲಿ ಜಾತಿ ಯುದ್ಧವೇ ಸ್ಫೋಟಿಸಬಹುದು: ಪ್ರೋಫೆಸರ್ ಬರ್ಧನ್

Update: 2016-04-14 12:33 GMT

ಹೊಸದಿಲ್ಲಿ ಎಪ್ರಿಲ್ 14: ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಪ್ರಣವ್‌ ಬರ್ಧನ್‌ರು ಭಾರತದಲ್ಲಿ ಉದ್ಯೋಗದ ಕೊರತೆಯಿಂದಾಗಿ ಜಾತಿ ಯುದ್ಧವೇ ಸಂಭವಿಸಬಹುದೆಂದು ಎಚ್ಚರಿಸಿದ ಬಗ್ಗೆ ವರದಿಯಾಗಿದೆ. ಕ್ಯಾಲಿಫೋರ್ನಿಯ ಯುನಿವರ್ಸಿಟಿಯಲ್ಲಿ ಇಕಾನಮಿಕ್ಸ್ ಪ್ರೋಫೆಸರ್ ಆಗಿರುವ ಬರ್ಧನ್‌ರವರು ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತಾಡುತ್ತಾ ಈಗಿನ ಕೇಂದ್ರ ಸರಕಾರವನ್ನು ಆರೆಸ್ಸೆಸ್-ಮೋದಿ ಸರಕಾರ ಎನ್ನುತ್ತೇನೆ ಎಂದಿದ್ದಾರೆ. "ಮೋದಿ ಸ್ಪಿನ್ ಮಾಸ್ಟರ್ ಆಗಿದ್ದಾರೆ ಮತ್ತು ಅವರು ಮೋಹಕ ಶಬ್ದಗಳನ್ನು ಬಳಸುವುದರಲ್ಲಿ ನಿಸ್ಸೀಮರು.ಮೋದಿ ಸರಕಾರ ಹೇಳುತ್ತಿದೆ-ಸುಲಭ ವ್ಯಾಪಾರಕ್ಕಾಗಿ ನಾವು ಜಗತ್ತಿನಲ್ಲಿ ಶ್ರೇಷ್ಠರಾಗಿದ್ದೇವೆ ಎಂದು. ಆದರೆ ವಾಸ್ತವ ಬೇರೆಯೇ ಇದೆ.ವಿಶ್ವಬ್ಯಾಂಕ್ ಪ್ರಕಾರ ನಾವು 130ನೆ ಸ್ಥಾನದಲ್ಲಿದ್ದೇವೆ. ಎಂಟರ್‌ಪ್ರೈಸಸ್ ಐಡಿ, ಸಿಂಗಲ್ ವಿಂಡೋ ಕ್ಲಿಯರೆನ್ಸ್ ಮತ್ತು ಬ್ಯಾಂಕರಪ್ಸಿ ಕೋಡ್ ನಂತಹ ಹೆಜ್ಜೆ ಉತ್ತಮವಾದದ್ದೇ ಆದರೆ ಇನೂಡೀ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡಲಿಕ್ಕೆ ಇದೆ" ಎಂದು ಬರ್ಧನ್ ಹೇಳಿದ್ದಾರೆ. ಸ್ಕಿಲ್ ಇಂಡಿಯಾ ಅಭಿಯಾನ ಮೋದಿ ಸರಕಾರ ಆರಂಭಿಸಿಯೇ ಇಲ್ಲ. ಇದು ಬಹಳ ಸಮಯದಿಂದ ಕೇಳಿಸುತ್ತ ಇತ್ತು. ಮೋದಿ ಸರಕಾರದ ಈ ಅಭಿಯಾನದಲ್ಲಿ ಎರಡು ವರ್ಷಗಳಲ್ಲಿ ಕೇವಲ 55ಲಕ್ಷ ಮಂದಿ ಮಾತ್ರ ಸೇರಿದ್ದಾರೆ ಅದೇ ವೇಳೆ ಚೀನಾದಲ್ಲಿ 9ಕೋಟಿ ಮಂದಿ ಸೇರ್ಪಡೆಯಾಗಿದ್ದಾರೆ. ನರೇಗಾದಂತಹ ಯೋಜನೆಯನ್ನು ಯುಪಿಎ ತಂದಿದೆ. ಅದನ್ನು ಮೋದಿ ಸರಕಾರ ಮುಂದುವರಿಸುತ್ತಿದೆ. ಮೋದಿ ಸ್ವಚ್ಛ ಭಾರತ್ ಅಭಿಯಾನ ಕೂಡಾ ನಿರ್ಮಲ ಭಾರತ ಅಭಿಯಾನವೇ ಆಗಿದೆ ಅದನ್ನೂ ಯುಪಿಎ ಆರಂಬಿಸಿತ್ತು. ಇದೇ ವೇಳೆ ಬಾಂಗ್ಲಾದೇಶ ಬಯಲು ಶೌಚಾಲಯದಿಂದ ಸಂಪೂರ್ಣ ಮುಕ್ತವಾಗಿದೆ. ಮೋದಿ ಪೊರಕೆ ಜೊತೆ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ" ಎಂದೂ ಬರ್ಧನ್ ಹೇಳಿರುವುದಾಗಿ ವರದಿಯಾಗಿದೆ.

ಭ್ರಷ್ಟಾಚಾರದ ಕುರಿತು ಮಾತಾಡುತ್ತ ಬರ್ಧನ್‌ರವರು" ಮೋದಿ ಇತ್ತೀಚೆಗೆ ಭ್ರಷ್ಟಾಚಾರ ಸಂಪೂರ್ಣ ಇಲ್ಲವಾಗಿದೆ ಎಂದರು. ಇದಕ್ಕೆ ಏನು ಪುರಾವೆ ಇದೆ. ಬಿಜೆಪಿ ಇರುವ ರಾಜ್ಯದಲ್ಲಿಯೇ ವ್ಯಾಪಂನಂತಹ ಹಗರಣವನ್ನು ನಿರ್ಲಕ್ಷಿಸಲಾಗುತ್ತಿದೆ. ಯುಪಿಎ ಸಮಯದಲ್ಲಿ ಖನಿಜ ಪದಾರ್ಥಗಳ ಬೆಲೆಯೇರಿಕೆಯಿಂದಾಗಿ ಹಗರಣಗಳಾಗಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 100ಕೋಟಿ ರೂ. ಜಾಹೀರಾತಿಗೆ ಖರ್ಚು ಮಾಡಿತ್ತು. ಎಲ್ಲ ಖರ್ಚು 500ಕೋಟಿರೂ.ಆಗಿತ್ತು. ಅವರಲ್ಲಿ ಇಷ್ಟು ಹಣ ಎಲ್ಲಿಂದ ಬಂತು" ಎಂದು ಬರ್ಧನ್ ಪ್ರಶ್ನಿಸಿದರು. ಮೋದಿಯ ಭ್ರಷ್ಟಾಚಾರ ಮುಕ್ತವಾದವನ್ನು ಗಂಭೀರವಾಗಿ ಪರಿಗಣಿಸುವಂತಿಲ್ಲ ಎಂದೂ ಬರ್ಧನ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News