×
Ad

ಬೆಳ್ತಂಗಡಿ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

Update: 2016-04-14 18:27 IST

ಬೆಳ್ತಂಗಡಿ: ತಾಯಿ ಮನೆಯಿಂದ ಗಂಡನ ಮನೆಗೆಂದು ತೆರಳಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಾಯಿ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದಾರೆ.

ನಾವೂರು ಗ್ರಾಮದ ತಾಯಿ ಮನೆಗೆ ಬಂದಿದ್ದ ಸುಮಲತ (30) ಆಕೆಯ ಮಕ್ಕಳಾದ ಸಾಹಿತ್ಯ (11) ಹಾಗೂ ಸ್ವಪ್ನ (9) ನಾವೂರಿನ ಮನೆಯಿಂದ ಎ 12 ರಂದು ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರದಲ್ಲಿರುವ ಗಂಡನ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು ಆದರೆ ಆಕೆ ಮತ್ತು ಮಕ್ಕಳು ಎನ್ ಆರ್ ಪುರಕ್ಕೆ ಹೋಗದೆ ಹಾಗೂ ಮನೆಗೂ ಹಿಂತಿರುಗದೆ ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ವಿಜಯ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದಾರೆ. ಈಕೆಯ ವಿವಾಹ ಎನ್ ಆರ್.ಪುರ ನಿವಾಸಿ ಸುನಿಲ್ ಎಂಬವರೊಂದಿಗೆ 12 ವರ್ಷಗಳ ಹಿಂದೆ ನಡೆದಿತ್ತು ಆರು ತಿಂಗಳ ಹಿಂದೆ ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ನಾವೂರಿನ ತಾಯಿ ಮನೆಗೆ ಬಂದಿದ್ದರು. ಮಕ್ಕಳು ಇಲ್ಲಿಯೇ ಶಾಲೆಗೆ ಸೇರಿಸಲಾಗಿತ್ತು. ಇದೀಗ ಮನೆಯಿಂದ ತೆರಳಿದವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲವಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News