ಪುತ್ತೂರು: ಶೂಟೌಟ್ ಪ್ರಕರಣ, ನ್ಯಾಯಾಂಗ ಬಂಧನ
ಪುತ್ತೂರು: ಪುತ್ತೂರು ನಗರ ರಾಜಧಾನಿ ಜುವೆಲ್ಲರ್ಸ್‌ಗೆ ಹಫ್ತಾ ವಸೂಲಿಗಾಗಿ ಬೈಕಲ್ಲಿ ಬಂದು ಗುಂಡು ಹಾರಿಸಿದ ಪ್ರಕರಣದ ಆರೋಪಿ ಅಬ್ದುಲ್ ಆಸಿರ್‌ಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದಲ್ಲಿ ಪಾಲ್ಗೊಂಡ ಫಯಾಜ್ ಮತ್ತು ಕುಂಬಳೆಯ ರಮೀರ್ಗಾಗಿ ಪುತ್ತೂರು ನಗರ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ಆರೋಪಿ ಅಬ್ದುಲ್ ಆಸಿರ್ ನೀಡಿದ ಮಾಹಿತಿಯಂತೆ ಕೃತ್ಯಕ್ಕೆ ಬಳಸಲಾದ ಮಾರುತಿ ಆಲ್ಟೋ ಕಾರು ಮತ್ತು ಬಜಾಜ್ ಪಲ್ಸರ್ ಬೈಕನ್ನು ನಗರ ಪೊಲೀಸರು ಉಪ್ಪಳದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಕುಖ್ಯಾತ ಪಾತಕಿ ಕಾಲಿಯಾ ರಫೀಕ್‌ನ ಸೂಚನೆಯಂತೆ ಈ ಪ್ರಕರಣ ನಡೆಸಿರುವುದಾಗಿ ಆರೋಪಿ ಪೊಲೀಸ್ ವಿಚಾರಣೆಯ ವೇಳೆಯಲ್ಲಿ ತಿಳಿಸಿದ್ದ ಎಂದು ತಿಳಿದು ಬಂದಿದೆ. ಆರೋಪಿಯನ್ನು ಪುತ್ತೂರು ನಗರದ ಕೊಂಬೆಟ್ಟು ಎಂಬಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶದಂತೆ ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಗುರುವಾರ ಆರೋಪಿಯ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.