ಪುತ್ತೂರು: ಕೊಲೆ ಆರೋಪಿಗಳಿಗೆ ನ್ಯಾಯಾಂಗ ಬಂಧನ
Update: 2016-04-14 19:42 IST
ಪುತ್ತೂರು: ರಬ್ಬರ್ ಟ್ಯಾಪಿಂಗ್ ಕಾರ್ಮಿಕನನ್ನು ಕೊಲೆ ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ರಬ್ಬರ್ ಟ್ಯಾಪರ್ ಸೆಲ್ವಕುಮಾರ್ ಎಂಬಾತನನ್ನು ರಬ್ಬರ್ ಟ್ರಾಪ್ ಮಾಡುವ ಕತ್ತಿಯಿಂದ ಕಡಿದು ಮಂಗಳವಾರ ರಾತ್ರಿ ಕೊಲೆ ನಡೆಸಲಾಗಿತ್ತು. ಕೊಲೆ ಮಾಡಿದ ಪ್ರಕರಣದ ಆರೋಪಿಗಳಾದ ರಾಧಾಕೃಷ್ಣ ಮತ್ತು ವಿಜಯ ಎಂಬವರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಓರ್ವ ಆರೋಪಿ ಜಗನ್ ಎಂಬಾತ ಹೊಡೆದಾಟದ ವೇಳೆಯಲ್ಲಿ ಗಾಯಗೊಂಡು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.