ದೇರಳಕಟ್ಟೆ ರೇಂಜ್ ಮ್ಯಾನೇಜ್‌ಮೆಂಟ್, ಸಮಸ್ತಾಭಿಮಾನಿಗಳ ಸಭೆ
ಉಳ್ಳಾಲ : ದೇರಳಕಟ್ಟೆ ರೇಂಜ್ ಮ್ಯಾನೇಜ್‌ಮೆಂಟ್ ಮತ್ತು ಸಮಸ್ತಾಭಿಮಾನಿಗಳ ಸಭೆಯು ಇತ್ತೀಚೆಗೆ ದೇರಳಕಟ್ಟೆಯಲ್ಲಿ ಮ್ಯಾನೇಜ್‌ಮೆಂಟ್ ಅಧ್ಯಕ್ಷರಾದ ಹಾಜಿ ಮೊದಿನ್ ಕುಂಞ ಅಧ್ಯಕ್ಷತೆಯಲ್ಲಿ ನಡೆಯಿತು. ದೇರಳಕಟ್ಟೆ ರೇಂಜ್ ಮಟ್ಟದಲ್ಲಿ ಮೇ 13 ರಂದು ಸಮಸ್ತದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶೈಖುನಾ ಜಾಮಿಯಾ ಕೆ ಆಲಿಕುಟ್ಟಿ ಉಸ್ತಾದ್‌ರವರ ಅಭಿನಂದನೆ ಹಾಗೂ ಚೆರುಶ್ಚೇರಿ ಉಸ್ತಾದ್ ಅನುಸ್ಮರಣಾ ಸಭೆಯನ್ನು ದೇರಳಕಟ್ಟೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.ಸಯ್ಯದ್ ಅಮೀರ್ ತಂಙಳ್ ದುಅ ನೆರವೇರಿಸಿದರು. ಸ್ಥಳೀಯ ಖತೀಬರಾದ ಅಬ್ದುನಾಸೀರ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಇಬ್ರಾಹಿಂ ಬಾಖವಿ ಕೆ ಸಿ ರೋಡ್, ಖಾಸಿಂ ದಾಲಿಯಾ ಲತೀ್ ದಾರಿಮಿ ಕೊಂಚಾಡಿ ಮಾತನಾಡಿದರು.
ಸಭೆಯಲ್ಲಿ ಮ್ಯಾನೇಜ್‌ಮೆಂಟಿನ ಗೌರವಾಧ್ಯಕ್ಷ ಡಾ. ಸುಲೈಮಾನ್, ಉಪಾಧ್ಯಕ್ಷರಾದ ಎಂ.ಎ ಅಬ್ದುಲ್ಲಾ, ಕೋಶಾಧಿಕಾರಿ ಅಬುಸಾಲಿಹ್ ಹಾಜಿ ಕುರಿಯಕರ್ ದೇರಳಕಟ್ಟೆ ಬದ್ರಿಯ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ದೇರಳಕಟ್ಟೆ, ವಿವಿಧ ಮಸೀದಿ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಸಮಸ್ತಾಭಿಮಾನಿಗಳು ಭಾಗವಹಿಸಿದ್ದರು. ಮ್ಯಾನೇಜ್‌ಮೆಂಟಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ ಸ್ವಾಗತಿಸಿ ವಂದಿಸಿದರು.