ಜಪಾನ್‌ನಲ್ಲಿ ಭೂಕಂಪ: ಸುನಾಮಿ ಭಯವಿಲ್ಲ
Update: 2016-04-14 21:00 IST
ಟೋಕಿಯೊ, ಎ. 14: ಜಪಾನ್‌ನ ನೈರುತ್ಯದ ಕ್ಯುಶು ಎಂಬ ದ್ವೀಪದಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 6.4ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಆದರೆ, ಸುನಾಮಿಯ ಅಪಾಯವಿಲ್ಲ ಎಂಬುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪವು ಸ್ಥಳೀಯ ಕಾಲಮಾನ ರಾತ್ರಿ 9:26ಕ್ಕೆ ಮಧ್ಯ ಕ್ಯುಶುವಿನ ಕುಮಮೋಟೊ ಎಂಬಲ್ಲಿ ಸಾಗರ ತಳದಿಂದ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿತು ಎಂದು ಜಪಾನ್ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.