ಮಂಗಳೂರು: ಆಟೋ ಪಲ್ಟಿ - ಚಾಲಕ ಮೃತ್ಯು
Update: 2016-04-14 22:57 IST
ಮಂಗಳೂರು, ಎ. 14: ಆಟೋ ರಿಕ್ಷಾವೊಂದು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟಿರುವ ಘಟನೆ ಇಂದು ಸಂಜೆ ಸರ್ಕ್ಯೂಟ್ ಹೌಸ್ ಬಳಿ ನಡೆದಿದೆ.
ಮೃತರನ್ನು ತೋಕ್ಕೊಟ್ಟು ಸಂತೋಷ್‌ನಗರದ ನಿವಾಸಿ ಹಾಗೂ ರಿಕ್ಷಾ ಚಾಲಕ ವೇಗಸ್ (52) ಎಂದು ಗುರುತಿಸಲಾಗಿದೆ.
ರಿಕ್ಷಾವನ್ನು ಚಲಾಯಿಸುತ್ತಿದ್ದ ವೇಗಸ್ ಇಂದು ಸಂಜೆ ಸುಮಾರು 4:30ಕ್ಕೆ ಬಿಜೈಯಿಂದ ಕೆಪಿಟಿ ಕಡೆಗೆ ಬರುತ್ತಿದ್ದಾಗ ಹಠಾತ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ತೀವ್ರ ತರದ ಗಾಯಗೊಂಡು ಮೃತಪಟ್ಟಿದ್ದಾರೆ.
ಮಂಗಳೂರು ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.