ಭಟ್ಕಳ : ಅನಿವಾಸಿ ಉಧ್ಯಮಿ, ಸಮಾಜ ಸೇವಕ, ಚಿಂತಕ ಸೈಯದ್ ಖಲೀಲುರ್ರೆಹಮಾನ್ ಸಾಹೇಬ್ ಅವರಿಗೆ ಗೌರವ ಡಾಕ್ಟರೇಟ್

Update: 2016-04-14 18:23 GMT

ಭಟ್ಕಳ : ಅನಿವಾಸಿ ಉಧ್ಯಮಿ, ಸಮಾಜ ಸೇವಕ, ಚಿಂತಕ ಸೈಯದ್ ಖಲೀಲುರ್ರೆಹಮಾನ್ ಸಾಹೇಬ್ ಇವರ ಅನನ್ಯ ಸೇವೆಯನ್ನು ಗುರುತಿಸಿ ಐರ್ಲೆಂಡಿನ ಅಲ್ಡರ್ಸ್ಗೆಟ್ ಕಾಲೇಜು ಗೌರವ ಡಾಕ್ಟರೇಟ್ ಪದವಿಯನ್ನು ನೀಡಲು ಗೌರವ ಪೂರ್ವಕವಾಗಿ ಇವರ ಹೆಸರನ್ನು ಸೂಚಿಸಿದೆ.

ದುಬೈನ ಅಟ್ಲಾಂಟಿಸ್ ಹೋಟೆಲ್‌ನಲ್ಲಿ ಎ.16ರಂದು ನಡೆಯಲಿರುವ ಸಮಾಂಭದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇವರ ಹೆಸರನ್ನು ಶಾರ್ಜಾದ ಹಾಲಿ ಮೆನೇಜ್‌ಮೆಂಟ್ ಕನ್ಸಲ್ಟೆನ್ಸಿ ಮತ್ತು ಇಂಡಿಯಾ ಟ್ರೇಡ್ ಎಂಡ್ ಎಕ್ಸಿಬಿಷನ್ ಸೆಂಟರ್ ಸಂಸ್ಥೆಗಳು ಶಿಫಾರಸು ಮಾಡಿದ್ದವು.

 ಭಟ್ಕಳದ ವ್ಯಕ್ತಿಯೋರ್ವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಿರುವುದು ಇದೇ ಪ್ರಥಮ ಬಾರಿಯಾಗಿದ್ದು ಭಟ್ಕಳದ ಜನತೆ ಇವರ ಬಗ್ಗೆ ಅತ್ಯಂತ ಸಂತಸ ಹಾಗೂ ಗೌರವ ವ್ಯಕ್ತಪಡಿಸಿದ್ದಾರೆ. ಭಟ್ಕಳ ಮೂಲದ ನವಾಯತರಲ್ಲಿ ಸಿ. ಎ. ಪಾಸಾದ ಪ್ರಥಮ ವ್ಯಕ್ತಿ ಎನ್ನುವ ಗೌರವಕ್ಕೂ ಇವರು ಅರ್ಹರಿದ್ದು ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News