×
Ad

ಶವವನ್ನು ನದಿಗೆಸೆದು ಮನೆಯವರಿಗೆ ಇನ್ನೊಂದು ಶವದ ಬೂದಿಯನ್ನು ತೋರಿಸಿದ ಉತ್ತರಪ್ರದೇಶದ ಪೊಲೀಸರು!

Update: 2016-04-15 16:49 IST

 ಬದೋಹಿ,ಎಪ್ರಿಲ್ 15: ಉತ್ತರಪ್ರದೇಶ ಬದೋಹಿ ಗೋಪಿಗಂಜ್‌ನಲ್ಲಿ ಪೊಲೀಸರು ಕೊಲೆಯಾದ ಸ್ಕಾರ್ಪಿಯೊ ಚಾಲಕನ ಶವದ ಅಂತಿಮ ಸಂಸ್ಕಾರ ಮಾಡುವ ಬದಲಾಗಿ ಗಂಗಾನದಿಗೆಸೆದು ಮನೆಯವರಿಗೆ ಯಾರದೋ ಚಿತೆಯನ್ನು ತೋರಿಸಿದ ಅಮಾನವೀಯ ಘಟನೆ ವರದಿಯಾಗಿದೆ. ಪೊಲೀಸರನ್ನು ಮನೆಯವರು ವಿಚಾರಿಸಿದಾಗ ಸ್ಮಶಾನದಲ್ಲಿ ಸುಟ್ಟಿದ್ದ ಬೇರೆ ಯಾರದ್ದೋ ಶವವನ್ನು ಚಾಲಕನದ್ದೆಂದು ತೋರಿಸಿದ್ದರು.

ಪೊಲೀಸರ ಶವವನ್ನು ನದಿಗೆಸೆದಿದ್ದಾರೆ ಮತ್ತು ಚಿತೆಯಲ್ಲಿಟ್ಟು ಸುಟ್ಟಿಲ್ಲ ಎಂದುಮನೆಯವರಿಗೆ ಮಹಿಳೆಯೊಬ್ಬಳು ತಿಳಿಸಿದ್ದಳು. ಅದಕಾರಣ ಅವರು ಗಂಗಾನಧಿಯಲ್ಲಿ ಯುವಕನ ಶವವವನ್ನು ಹುಡುಕಾಡಿದರು. ನದಿಯಲ್ಲಿ ಮನೆಯವರಿಗೆ ಯುವಕನ ಶವದೊರಕಿತು ಎಂದು ವರದಿಗಳು ತಿಳಿಸಿವೆ.

      ಬುಧವಾರ ಕೊಪಾಗಂಜ್ ನಿವಾಸಿ ಮೂವತ್ತೈದು ವರ್ಷದ ಯುವಕನ ಮೃತದೇಹ ಡೊಮನಪುರದಲ್ಲಿ ದೊರಕಿತ್ತು. ಕೊರಳಲ್ಲಿ ಗಾಯವಿದ್ದುದರಿಂದ ಯಾರಿಂದಲೋ ಕೊಲೆಯಾಗಿರುವ ಸಂದೇಹ ಬಲವಾಗಿತ್ತು. ಮೃತನ ಮನೆಯವರಿಗೆ ಈ ವಿಷಯ ತಿಳಿದಾಗ ಅವರು ಶವವನ್ನು ಪಡೆಯಲಿಕ್ಕಾಗಿ ಗೋಪಿಗಂಜ್ ಠಾಣೆಗೆ ಹೋಗಿದ್ದರು. ಪೊಲೀಸರು ಗಂಗಾನದಿಗೆ ಬಿಸಾಡಿ ಶವಸಂಸ್ಕಾರ ಮಾಡಿ ಬಿಟ್ಟಿದ್ದರು. ಮನೆಯವರಲ್ಲಿ ಶವದ ಅಂತಿಮ ಸಂಸ್ಕಾರ ನಡೆಸಲಾಗಿದೆ ಎಂದರಲ್ಲದೆ ಜಹಾಂಗೀರಾಬಾದ್ ಗಂಗಾ ಘಾಟ್‌ನ ಚಿತೆಯೊಂದರ ಬೂದಿಯನ್ನು ತೋರಿಸಿದ್ದರು. ಮನೆಯವರು ಆ ಬೂಧಿಯನ್ನು ಎತ್ತಿಕೊಂಡ ನಂತರ ಪೊಲೀಸರು ಅಲ್ಲಿಂದ ಮರಳಿದ್ದರು. ಅಷ್ಟರಲ್ಲಿ ಮಹಿಳೆಯೊಬ್ಬರು ಪೊಲೀಸರು ಶವವನ್ನು ನದಿಗೆ ಎಸೆದ ಬಗ್ಗೆ ಮೃತನ ಮನೆಯವರಿಗೆ ತಿಳಿಸಿದ್ದಳು . ನದಿಯಲ್ಲಿ ಸ್ವಲ್ಪಸಮಯ ಹುಡುಕಿದಾಗ ಗಂಗಾ ನದಿಯಲ್ಲಿ ತೇಲಾಡುತ್ತಿದ್ದ ಶವದೊರಕಿತ್ತು. ಶವವನ್ನು ಎತ್ತಕೊಂಡು ಅವರು ಪೊಲೀಸ್ ಠಾಣೆಗೆ ಬಂದು ದೊಡ್ಡ ಗಲಾಟೆ ನಡೆಸಿದರು. ವಿಷಯ ತಿಳಿದುಠಾಣೆಗೆ ಭೇಟಿ ನೀಡಿದ ವಿದ್ಯಾಂಚಲ್‌ನ ಡಿಐಜಿ ರತನ್ ಕುಮಾರ್ ಶ್ರೀವಾಸ್ತವ ಮತ್ತು ಎಸ್ಪಿ ಪಿಕೆ ಮಿಶ್ರ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಗೋಪಿಗಂಜ್ ಠಾಣೆಯ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನುತುಗೊಳಿಸಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News