ಕಾಂಗ್ರೆಸಿನ ಬದಲು ಬಿಜೆಪಿಗೆ ವೋಟು ನೀಡಿದ ಪತ್ನಿ: ಗ್ರಾಮೀಣರ ಎದುರೇ ವಿಚ್ಛೇದನ ನೀಡಿದ ಪತಿ!
ಹೊಸದಿಲ್ಲಿ, ಎಪ್ರಿಲ್.15: ಅಸ್ಸಾಮ್ ಚುನಾವಣೆಯಲ್ಲಿ ಮಹಿಳೆಯೊಬ್ಬರು ಬಿಜೆಪಿಗೆ ವೋಟು ಚಲಾಯಿಸಿದ್ದಕ್ಕಾಗಿ ಪತಿಯಿಂದ ವಿಚ್ಛೇದನ ಪಡೆದು ಕೊಂಡಿರುವ ಘಟನೆ ವರದಿಯಾಗಿದೆ. ಅಸ್ಸಾಮ್‌ನ ಸ್ಥಳೀಯ ಮಾಧ್ಯಮಗಳನ್ನು ಈ ಸುದ್ದಿ ಗುರುವಾರವೇ ಆವರಿಸಿಕೊಂಡಿತ್ತು ಎಂದು ವರದಿಗಳು ತಿಳಿಸಿವೆ. ಮಾಧ್ಯಮ ವರದಿಗಾರರ ಪ್ರಕಾರ ಪತ್ನಿಗೆ ವಿಚ್ಛೇದನ ನೀಡಿರುವ ಮುಸ್ಲಿಮ್ ವ್ಯಕ್ತಿ ಕಾರ್ಮಿಕನಾಗಿದ್ದು ಈ ಘಟನೆ ಸೋನಿಪುರ ಜಿಲ್ಲೆಯ ಡೋನಮ್ ಅಯಿಡಾಹಿತಿ ಗ್ರಾಮದಲ್ಲಿ ನಡೆದಿದೆಯೆನ್ನಲಾಗಿದೆ. ವರದಿಯಾಗಿರುವ ಪ್ರಕಾರ ಎನುದ್ದೀನ್ ಎಂಬಾತ ತನ್ನೂರಿನ ಜನರ ಸಮಕ್ಷಮದಲ್ಲಿ ಪತ್ನಿ ದಿಲ್‌ವಾರಾ ಬೇಗಮ್‌ರಿಗೆ ತಲಾಕ್ ನೀಡಿದ್ದಾನೆ. ಹತ್ತು ವರ್ಷದ ಮೊದಲು ಇಬ್ಬರ ಮದುವೆ ನಡೆದಿತ್ತು. ಕಾಂಗ್ರೆಸ್‌ಗೆ ವೋಟು ನೀಡುವ ಬದಲಾಗಿ ಬಿಜೆಪಿಗೆ ವೋಟು ನೀಡಿದ್ದು ಆತನ ಪತ್ನಿಯ ತಪ್ಪಾಗಿತ್ತು. ಆಮೂಲಕ ಅವಳು ಗ್ರಾಮದ ಹಿರಿಯರ ಆದೇಶವನ್ನು ನಿರಾಕರಿಸಿದ್ದಳು. ಆದ್ದರಿಂದ ಗ್ರಾಮೀಣರ ಮುಂದೆ ಪತಿ ಅವಳಿಗೆ ತಲಾಖ್ ನೀಡಬೇಕಾಯಿತು. ಕಳೆದ ಎಪ್ರಿಲ್ 4ರಂದು ನಡೆದ ಅಸ್ಸಾಮ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮೋದ್ ಬೋರಾಠಾಕುರ್‌ಗೆ ವೋಟು ಹಾಕಿ ವಿಚ್ಛೇದನ ಪಡೆದ ಈ ಮಹಿಳೆ ಮೂರು ಮಕ್ಕಳ ತಾಯಿಯೆಂದು ವರದಿಯಾಗಿದೆ.
ಈ ಪ್ರಕರಣವನ್ನು ಅಸ್ಸಾಮ್ ಚುನಾವಣೆಯ ಧ್ರುವೀಕರಣದೊಂದಿಗೆ ಜೋಡಿಸಿ ವೀಕ್ಷಿಸಲಾಗುತ್ತಿದೆ. ಮಣಿಪುರದ ಬಿಜೆಪಿ ಈ ಸ್ಥಳೀಯ ಸುದ್ದಿಯನ್ನು ಶೇರ್ ಮಾಡಿದೆ. ಅಸ್ಸಾಮ್ ಚುನಾವಣೆಯಲ್ಲಿ ಮುಸ್ಲಿಮ್ ಮತದಾರರು ಬಹುದೊಡ್ಡ ಪಾತ್ರವನ್ನು ವಹಿಸುತ್ತಾ ಬಂದಿದ್ದಾರೆ ಎಂದು ವರದಿ ತಿಳಿಸಿದೆ.