ಉಳ್ಳಾಲ: ಕೋಟೆಕಾರ್, ಪಂ.ಚುನಾವಣೆ: 17ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯಥಿ ಅವಿರೋಧ ಆಯ್ಕೆ
ಉಳ್ಳಾಲ: ಕೋಟೆಕಾರ್ ಪಟ್ಟಣಪಂಚಾಯತ್ ನ 17 ವಾರ್ಡ್ ಕೋಮರಂಗಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಪ್ರಿಲ್ 24ರಂದು ನಡೆಯಲಿರುವ ನಗರ ಮತ್ತು ಪಟ್ಟಣ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಕೋಟೆಕಾರ್ ಪ.ಪಂ. ವ್ಯಾಪ್ತಿಯ ಕೋಮರಂಗಲ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊಯ್ದಿನ್ ಬಾವ ಪಕ್ಷೇತರ ಅಭ್ಯರ್ಥಿಯಾಗಿ ಅಬೂಬಕರ್ ಸಿದ್ದೀಕ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಪಕ್ಷೇತರ ಅಭ್ಯರ್ಥಿ ಅಬೂಬಕರ್ ಸಿದ್ದೀಕ್ ನಾಮಪತ್ರ ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ಮೊಯ್ದಿನ್ ಬಾವ ಅವಿರೋಧವಾಗಿ ಆಯ್ಕೆಯಾದರು.
ಈ ಕಾರಣದಿಂದ ಕಾಂಗ್ರೆಸ್ ಕಾರ್ಯಕರ್ತರು ಕೊಮರಂಗಲ ವಾರ್ಡ್‌ನಲ್ಲಿ ಸಂತಸದಿಂದ ಸಂಭ್ರಮಿಸಿದರು. ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಕುಮಾರ್, ಕಿನ್ಯ- ತಲಪಾಡಿ ತಾ.ಪಂ. ಸದಸ್ಯ ಸಿದ್ದೀಕ್ ತಲಪಾಡಿ, ಕೋಟೆಕಾರ್ ಪಂಚಾಯತ್ ನ ಮಾಜಿ ಸದಸ್ಯರಾದ ಅಹ್ಮದ್ , ಮೋಹನ್ ಮುದ್ಯ, ಜಿ.ಪಂ. ಮಾಜಿ ಸದಸ್ಯ ಎನ್ ಎಸ್ ಕರೀಂ, ಸುರೇಶ್ ಭಟ್ನಗರ, ಆಲ್ವಿನ್‌ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.