ಹೊಸ ಗುರು ಗ್ರಹ ಪತ್ತೆಹಚ್ಚಿದ ಕೆಪ್ಲರ್
Update: 2016-04-15 23:06 IST
ವಾಶಿಂಗ್ಟನ್, ಎ. 15: ನಾಸಾದ ಗ್ರಹ ಶೋಧಕ ನೌಕೆ ಕೆಪ್ಲರ್ ನಮ್ಮ ಸೌರಮಂಡಲದಿಂದ ಹೊರಗೆ ಗುರುವನ್ನು ಹೋಲುವ ನೂತನ ಗ್ರಹವೊಂದನ್ನು ಪತ್ತೆಹಚ್ಚಿದೆ. ಈ ಗ್ರಹವು ಭೂಮಿಯಿಂದ 545 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ 260 ಕೋಟಿ ವರ್ಷ ಪ್ರಾಯದ ನಕ್ಷತ್ರವೊಂದರ ಸುತ್ತ ಸುತ್ತುತ್ತಿದೆ.
ಅದು ಸೂರ್ಯನ ಸುತ್ತ ಸುತ್ತಲು 10ಕ್ಕೂ ಕಡಿಮೆ ದಿನಗಳನ್ನು ತೆಗೆದುಕೊಳ್ಳುತ್ತದೆ.