×
Ad

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

Update: 2016-04-15 23:23 IST

ಪಡುಬಿದ್ರೆ, ಎ.15: ಉಡುಪಿ ಪವರ್ ಕಾರ್ಪೊರೇಶನ್ ಹಾಗೂ ಅದಾನಿ ಫೌಂಡೇಶನ್ ವತಿಯಿಂದ ಮುದರಂಗಡಿ ಗ್ರಾಪಂ ವ್ಯಾಪ್ತಿಯ ವಿದ್ಯಾನಗರ ಸರಕಾರಿ ಪ್ರೌಢಶಾಲೆ ಬಳಿ ನಿರ್ಮಿಸಿದ ಶುದ್ಧ ನೀರಿನ ಘಟಕವನ್ನು ಮುದರಂಗಡಿ ಚರ್ಚ್‌ನ ಧರ್ಮಗುರು ಲೂಯಿಸ್ ಡೇಸಾ ಉದ್ಘಾಟಿಸಿದರು.
ಯುಪಿಸಿಎಲ್‌ನ ಸಾಮಾಜಿಕ ಹೊಣೆ ಗಾರಿಕಾ ಯೋಜನೆ ಯಡಿ 20 ಲಕ್ಷ ರೂ. ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ. ಎಲ್ಲೂರು ಹಾಗೂ ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳ ಕಾಮಗಾರಿಗಳು ನಡೆಯುತ್ತಿದ್ದು, ಬೆಳಪು ಮತ್ತು ತೆಂಕ ಗ್ರಾಮಗಳು ಸೇರಿ ಐದು ಕಡೆ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಫೌಂಡೇಶನ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದರು. ತಾಪಂ ಸದಸ್ಯರಾದ ರಮೇಶ್ ಮೈಕಲ್ ಡಿಸೋಜ, ಮುದರಂಗಡಿ ಗ್ರಾಪಂ ಸದಸ್ಯರಾದ ಸುಕುಮಾರ್ ಶೆಟ್ಟಿ, ರವೀಂದ್ರ ಪ್ರಭು, ಶರತ್, ಮುದರಂಗಡಿಯ ಸಂತ ಕ್ಸೇವಿಯರ್ ಚರ್ಚ್‌ನ ಉಪಾಧ್ಯಕ್ಷ ಸುನೀಲ್ ಡಿಸೊಜ, ಅದಾನಿ ಯುಪಿ ಸಿಎಲ್‌ನ ಸಹಾಯಕ ಉಪಾಧ್ಯಕ್ಷ ಲಕ್ಷ್ಮಣ್, ಸಹಾಯಕ ಮಹಾ ಪ್ರಬಂಧಕ ಗಿರೀಶ್ ನಾವಡ, ಪ್ರಬಂಧಕರಾದ ರವಿ ಆರ್. ಜೀರೆ, ಗೋಕುಲ್ ದಾಸ್, ವಸಂತ ಕುಮಾರ್, ಅದಾನಿ ಫೌಂಡೇಶನ್ ಸಿಬ್ಬಂದಿ ವಿನೀತ್ ಅಂಚನ್, ಸುಕೇಶ್ ಸುವರ್ಣ, ಧೀರಜ್ ದೇವಾಡಿಗ, ಶಿವಪ್ರಸಾದ್ ಶೆಟ್ಟಿ, ಅನು ದೀಪ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News