ಮೇ 2-3: ಪರಿಸರ ಸಂರಕ್ಷಣೆ ಕುರಿತ ಅಧ್ಯಯನ ಶಿಬಿರ
ಉಡುಪಿ, ಎ.15: ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿ ಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯಕ್ಕೆ ಸೇರಿದ ಸೀತಾನದಿ ನಿಸರ್ಗಧಾಮದಲ್ಲಿ ಮೇ 2 ಮತ್ತು 3ರಂದು ಮೈಸೂರು ವಲಯಮಟ್ಟದ ‘ಪರಿಸರ ಸಂರಕ್ಷಣೆ’ ಕುರಿತ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಪಶ್ಚಿಮಘಟ್ಟ ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ನೆಲ-ಜಲ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ 30 ಮಂದಿಗೆ ಶಿಬಿರವನ್ನು ಸಂಘಟಿಸಲಾಗಿದೆ. ಶಿಬಿರದಲ್ಲಿ ಶಾಲಾ-ಕಾಲೇಜುಗಳ ಶಿಕ್ಷಕರು/ಉಪ ನ್ಯಾಸಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪರಿಸರ ಆಸಕ್ತರು ಭಾಗವಹಿಸಬಹುದು. ಶಿಬಿರಾ ರ್ಥಿಗಳಿಗೆ ಉಚಿತ ಊಟೋಪಚಾರ ಹಾಗೂ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಉಪ ಪ್ರಾಂಶುಪಾಲರು, ಪ್ರೌಢಶಾಲಾ ವಿಭಾಗ, ಸರಕಾರಿ ಪದವಿ ಪೂರ್ವ ಕಾಲೇಜು, ಹೆಬ್ರಿ, ಕಾರ್ಕಳ ಈ ವಿಳಾಸಕ್ಕೆ ಮೊಬೈಲ್ ಸಂಖ್ಯೆ ಸಹಿತ ತಮ್ಮ ವೈಯಕ್ತಿಕ ವಿವ ರಗಳೊಂದಿಗೆ ಅರ್ಜಿ ಸಲ್ಲಿಸಿ ಹೆಸರನ್ನು ಎ.23ರೊಳಗೆ ನೋಂದಾಯಿಸಿಕೊಳ್ಳಬಹುದು ಅಥವಾ ಈ ಕೆಳಗಿನ ಈಮೇಲ್ ವಿಳಾಸದಲ್ಲಿ ಹೆಸರನ್ನು ದಾಖಲಿಸಿಕೊಳ್ಳಬಹುದು. ಇಮೇಲ್: ಝ್ಠಿಚ್ಝ್ಞಜಚ್ಟಃಟಟ.್ಚಟಞ/ಜ್ಞಿಛಿಛಿಠಿಠಿಜಿಜಚ್ಟ10ಃಜಞಜ್ಝಿ.್ಚಟಞ.
ಮಾಹಿತಿಗಾಗಿ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಟಿ.ಜಿ.ಪ್ರೇಮಕುಮಾರ್(ಮೊ.ನಂ: 9448588352) ಅಥವಾ ಉಡುಪಿ ಜಿಲ್ಲಾ ಸಂಚಾಲಕ ದಿನೇಶ್ ಶೆಟ್ಟಿಗಾರ್, ಶಿಕ್ಷಕರು ಸ.ಪೂ.ಕಾಲೇಜು, ಹೆಬ್ರಿ, ಕಾರ್ಕಳ (ಮೊ.ನಂ: 9449045697) ಇವರನ್ನು ಸಂಪರ್ಕಿಸಬಹುದು.