×
Ad

ನಿರಂತರ ಶಿಕ್ಷಣ ಕಾರ್ಯಾಗಾರ ಉದ್ಘಾಟನೆ

Update: 2016-04-15 23:25 IST


ಉಳ್ಳಾಲ, ಎ.15: ಕಾರ್ಯಾಗಾರಗಳು ಜ್ಞಾನವೃದ್ಧಿಗೆ ಸಹಕಾರಿಯಾಗಲಿದೆ. ಹಾಗಾಗಿ ವೈದ್ಯರುಗಳು ಸಂಶೋಧನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಯಶಸ್ಸಿಗೆ ಶ್ರಮವಹಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಸ್. ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಎ.ಬಿ ಶೆಟ್ಟಿ ದಂತ ಮಹಾ ವಿದ್ಯಾಲಯದ ವಿಂಶತಿ ಭವನದಲ್ಲಿ ಜರಗಿದ ‘ಮಿನಿಮಲ್ ಇನ್ವೇಸಿವ್ ಎಸ್ಥೆಟಿಕ್ ಆ್ಯಂಡ್ ಏಂಡ್ ಏಜಿಂಗ್ ಮೆಡಿಸಿನ್’ ನಿರಂತರ ಶಿಕ್ಷಣ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
   ಕಾರ್ಯಾಗಾರವನ್ನು ಯೆನೆಪೊಯ ದಂತ ಕಾಲೇಜಿನ ಡೀನ್ ಡಾ. ಶ್ರೀಪತಿ ರಾವ್ ಉದ್ಘಾ ಟಿಸಿದರು. ಕ್ರೋಷಿಯಾದ ಡಿಎಂಡಿ ಏಸ್ತೆಟಿಕ್‌ನ ಡಾ.ಇವೋನಾ ಇಗರ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕ್ಷೇಮದ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ಸ್ನಾತ್ತಕೋತ್ತರ ಕಲಿಕಾ ವಿಭಾಗಗಳ ನಿರ್ದೇಶಕ ಡಾ.ಬಿ.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News