ಬೇಸಿಗೆ ಶಿಬಿರ ಸಮಾರೋಪ
ಮಣಿಪಾಲ ಎ.15: ಭಾರತೀಯ ವಿಕಾಸ ಟ್ರಸ್ಟ್ ಮತ್ತು ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ನ ಜಂಟಿ ಆಶ್ರಯದಲ್ಲಿ ಒಂದು ವಾರ ಕಾಲ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಬೇಸಿಗೆ ಶಿಬಿರದ ಸಮಾ ರೋಪ ಸಮಾರಂಭ ಇಂದು ಭಾರತೀಯ ವಿಕಾಸ ಟ್ರಸ್ಟಿನಲ್ಲಿ ನಡೆಯಿತು.ಬಿವಿಟಿ ಟ್ರಸ್ಟಿ ಹಾಗೂ ಮಣಿಪಾಲದ ಬೆಸ್ಟ್ ಸೆಲ್ಲರ್ಸ್ ಸಂಸ್ಥೆಯ ಮುಖ್ಯಸ್ಥ ಟಿ. ಸಚಿನ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಮಾತನಾಡಿದರು. ಬಿವಿಟಿ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಸ್ವಾಗತಿಸಿದರು. ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಕಟ್ಗೇರಿ ವಂದಿಸಿದರು. ರಜಾ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ರಜಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಎಂ.ಉಡುಪ, ಡಾ. ಧನಂಜಯ, ಡಾ.ಪಿ.ವಿ.ಭಂಡಾರಿ, ಡಾ.ರಾಮಚಂದ್ರ ಕಾಮತ್, ಡಾ.ಶ್ರೀಧರ ಬಾಯಿರಿ, ಡಾ.ಭಾರತಿ ಮರವಂತೆ, ಮನೋಹರ ಕಟ್ಗೇರಿ, ಎ.ಪಿ.ಕೊಡಂಚ, ಲಕ್ಷ್ಮೀಬಾಯಿ, ಗಣೇಶ ಗಂಗೊಳ್ಳಿ, ಗುರುರಾಜ ಐತಾಳ, ಸೀತಾರಾಮ ಶೆಟ್ಟಿ, ಆರೂರು ಮಂಜುನಾಥ ರಾವ್, ಬಿ.ಸಿ.ರಾವ್, ಶ್ರೀದೇವಿ, ಭಾಸ್ಕರ ಕಾಮತ್ ಭಾಗವಹಿಸಿದ್ದರು.