ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಬಹುಮಾನ
ಪುತ್ತೂರು, ಎ.15: ಬೆಂಗಳೂರಿನ ಅಗಸ್ತ್ಯ ಇಂಟರ್ನೇಶನಲ್ ಫೌಂಡೇಶನ್ ಮತ್ತು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿ ಮ್ಯೂಸಿಯಂನ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ‘ವಿಜ್ಞಾನ ಮತ್ತು ತಾಂತ್ರಿಕ ಪ್ರದರ್ಶನ ಅನ್ವೇಷಣಾ-2016’ ರಲ್ಲಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಮಹೇಶ್ ಎ, ತೀರ್ಥಪ್ರಸಾದ್ ಎಚ್, ಪ್ರದೀಪ್ ಕುಮಾರ್ ಎಂ.ಬಿ. ಮತ್ತು ಸಚಿನ್ ಎ. ಸಿದ್ಧಪ ಡಿಸಿದ ‘ಪರ್ಫಾರ್ಮೆನ್ಸ್ ಸ್ಟಡಿ ಆನ್ ಪ್ರೆಸ್ನೆಲ್ ಲೆನ್ಸ್ ಬೇಸ್ಡ್ ವಾಟರ್ ಡಿಸ್ಟಿಲ್ಲೇಶನ್ ಸಿಸ್ಟಮ್’ ಎಂಬ ತಂತ್ರಜ್ಞಾನವು ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡಿದೆ. ಪ್ರದರ್ಶಿಸಲ್ಪಟ್ಟ 45 ಪ್ರಾಜೆಕ್ಟ್‌ಗಳಲ್ಲಿ ಇದು 6ನೆ ಸ್ಥಾನವನ್ನು ಗಳಿಸಿಕೊಂಡಿದೆ. ಕೊಂಬೆಟ್ಟಿನ ಸರಕಾರಿ ಪ್ರೌಢಶಾಲೆಯ 9ನೆ ತರಗತಿಯ ವಿದ್ಯಾರ್ಥಿಗಳಾದ ಪ್ರತೀಕ್‌ರಾಜ್ ಮತ್ತು ಸನತ್‌ರಾಘವ್ ವಿವರಣಾಕಾರರಾಗಿ ಭಾಗವಹಿಸಿದ್ದರು. ಉಪನ್ಯಾಸಕ ಪ್ರೊ. ಸತೀಶ್ ಕುಮಾರ್ ಕೆ. ಮಾರ್ಗದರ್ಶನ ನೀಡಿದ್ದರು.